History

1965 ರ ಸತ್ಯ ಸಂಗತಿ. ನಮ್ಮ ಮುಖ್ಯಮಂತ್ರಿ ಹಾಗೂ ಅವರ ಮಡದಿಯನ್ನು ಕೊಂದ ಪಾಕ್ ಸೇನೆ! ಕ್ಷುಲ್ಲಕ ಕಾರಣ ನೀಡಿ ತಪ್ಪಿಸಿಕೊಂಡಿತು!

ಅಂದು 19 ಸೆಪ್ಟೆಂಬರ್ 1965 ನೇ ಇಸವಿ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಯುದ್ಧ ನಡೆಯುತ್ತಿತ್ತು. ಅಂದಿನ ಗುಜರಾತ್ ಮುಖ್ಯಮಂತ್ರಿ ಬಲ್ವಂತರಾಯ್ ಮೆಹತಾ ಅಹ್ಮದಾಬಾದ್ ನಿಂದ ಖಾಸಗಿ ವಿಮಾನದಲ್ಲಿ ತನ್ನ ಮಡದಿಯೊಂದಿಗೆ ‘ಮಿತಾಪೂರ್’ ಗೆ ಹೊರಟಿದ್ದರು. ಮಿತಾಪೂರ್- ಭಾರತ ಪಾಕಿಸ್ತಾನ ಬಾರ್ಡರ್ ನಲ್ಲಿರುವ ಪ್ರದೇಶ. ಇನ್ನೇನು 30 ನಿಮಿಷಗಳಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತದೆ ಎನ್ನುವಾಗ… ಪಾಕ್ ವಿಮಾನವೊಂದು ಮೆಹತಾ ಹಾಗೂ ಆತನ ಪತ್ನಿಯಿದ್ದ ವಿಮಾನವನ್ನು ಹೊಡೆದುರುಳಿಸಿತು.ಈ ದುರ್ಘಟನೆಯಲ್ಲಿ ಮೆಹತಾರೊಂದಿಗೆ ಪ್ರಯಾಣಿಸುತ್ತಿದ್ದ ಏಳು ಮಂದಿಯೂ ಸಹ ಮರಣಿಸಿದರು.

ಈ ಘಟನೆ ಜರುಗಿದ ಬಹಳ ದಿನಗಳ ನಂತರ … ಪಾಕ್ ಯುದ್ಧ ವಿಮಾನವನ್ನು ನಡೆಸಿದ ಪೈಲೆಟ್ ಕೈಸ್ ಹುಸೇನ್, ಮೆಹತಾ ಇದ್ದ ವಿಮಾನದ ಪೈಲೆಟ್ ಮಗಳಿಗೆ ಒಂದು ಪತ್ರವನ್ನು ಬರೆದು’ ನನ್ನನ್ನು ಕ್ಷಮಿಸಮ್ಮಾ…ಯುದ್ಧ ಸಮಯದಲ್ಲಿ ಪಾಕಿಸ್ತಾನ್ ಬಾರ್ಡರ್ ಪ್ರವೇಶಿಸಿದ ವಿಮಾನವನ್ನು ಯುದ್ಧ ವಿಮಾನವೆಂದು ತಪ್ಪಾಗಿ ಭಾವಿಸಿ ಹೊಡೆದುರುಳಿಸಲಾಯಿತು. ಇದರಿಂದಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ನಿಮ್ಮ ತಂದೆ ತಾಯಿಯೊಂದಿಗೆ ಇತರರೂ ಮರಣಿಸಿದರು. ಇದಕ್ಕೆ ಕ್ಷಮೆಯಿರಲಿ’ ಎಂದು ತಿಳಿಸಿದರು.

ನಿಜವಾಗಿಯೂ ನಮ್ಮ ವಿಮಾನ ಬಾರ್ಡರ್ ದಾಟಿತ್ತಾ?
ಇಲ್ಲ. ಮೆಹತಾ ಇದ್ದ ವಿಮಾನ ಭಾರತ ವಾಯು ಪ್ರದೇಶದಲ್ಲೇ ಇತ್ತು. ಪಾಕ್ ಯುದ್ಧ ವಿಮಾನವೇ 20,000 ಅಡಿಗಳ ಎತ್ತರದಲ್ಲಿ ಭಾರತದ ವಾಯು ಪ್ರದೇಶಕ್ಕೆ ಬಂದು ಮೆಹತಾ ಪ್ರಯಾಣಿಸುತ್ತಿದ್ದ ವಿಮಾನವನ್ನು ಹೊಡೆದುರುಳಿಸಿತು.

ಪರಿಣಾಮ : ಭಾರತೀಯ ಸೇನೆ 1965 ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಸೈನ್ಯವನ್ನು, ದೇಶವನ್ನು ದೈರ್ಯವಾಗಿ ಮುನ್ನಡೆಸಿದ ಅಂದಿನ ಭಾರತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ರಿ ಯವರನ್ನು ಪಾಕ್ ಅಧ್ಯಕ್ಷ ಅಯೂಬ್ ಖಾನ್ ಯುದ್ಧ ವಿರಾಮ ಒಪ್ಪಂದಕ್ಕಾಗಿ ಅಂಗಲಾಚಿ ಬೇಡಿಕೊಂಡರು.

Comment here