HistoryInformation

9 ಅಡಿಯ ಶಿವಲಿಂಗಕ್ಕೆ 35 ವರ್ಷದಿಂದ 84 ವಯಸ್ಸಿನ ಪೂಜಾರಿಯ ಪೂಜೆ – ಇವರೇ ನಿಜವಾದ ಬಾಹುಬಲಿ !

ಕರ್ನಾಟಕದ ಹಂಪಿಯ ವಿಜಯನಗರ ಸಾಮ್ರಾಜ್ಯದವರು ಈ 9 ಅಡಿಯ ಶಿವಲಿಂಗವನ್ನು ಪ್ರತಿಷ್ಠಾಪಿಸಿದವರು. ಬಹಮನಿ ಸುಲ್ತಾನರ ದಾಳಿಯ ‌ನಂತರ ಈ ಶಿವಲಿಂಗಕ್ಕೆ ಪೂಜೆ ಮಾಡುವುದನ್ನು ನಿಲ್ಲಿಸಲಾಯಿತು. ಈಗ 450 ವರ್ಷಗಳ ನಂತರ 1980 ರಲ್ಲಿ ಈ ಶಿವಲಿಂಗಕ್ಕೆ ಪೂಜೆ ಮಾಡುವುದು ಪುನಃ ಪ್ರಾರಂಭವಾಯ್ತು. 35 ವರ್ಷದಿಂದ ಇದೋ ಈ ಫೋಟೋದಲ್ಲಿ ಕಾಣುವ ಪೂಜಾರಿ ಈ ಶಿವಲಿಂಗಕ್ಕೆ ಪೂಜೆ ಮಾಡುತ್ತಿದ್ದಾರೆ.

ಬರೋಬ್ಬರಿ 9 ಅಡಿಯ ಆ ಶಿವಲಿಂಗವನ್ನು 84 ವಯಸ್ಸಿನ ಪೂಜಾರಿ ಸ್ವಚ್ಚಗೊಳಿಸಿ ಅಭಿಶೇಕ ಮಾಡುತ್ತಾರೆ. ಇದಕ್ಕಾಗಿ ಅವರಿಗೆ ವರ್ಷಕ್ಕೆ ಎರಡು ಬಾರಿ ಮಾತ್ರವೇ ಸಂಬಳವನ್ನು ನೀಡಲಾಗುತ್ತದೆ. ಆದಾಗ್ಯೂ ಅವರು ದುಡ್ಡಿಗಾಗಿ ಇದನ್ನು ಮಾಡದೇ ದೈವ ಭಕ್ತಿಯಿಂದ ಈ ಪೂಜೆ (ಕೆಲಸ) ಮಾಡುತ್ತಾರೆ.

ಈತನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇವರ ದೇಹದಾರ್ಡ್ಯವನ್ನು ನೋಡಿ ಇವನೇ ನಿಜವಾದ ಬಾಹುಬಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Comment here