Information

ಅಂಬಾನಿ ಗೆಳೆಯರ ಸಂಬಳ ಹೀಗಿರುತ್ತೆ ನೋಡಿ. 6 ನೇ ತರಗತಿಯ ಗೆಳೆಯನಿಗೆ 15 ಕೋಟಿ, ಇಂಜಿನೀರಿಂಗ್ ಗೆಳೆಯನಿಗೆ 10 ಕೋಟಿ.!

ಅಂಬಾನಿಯ ಬಗ್ಗೆ ಗೊತ್ತಿಲ್ಲದವರು ಯಾರಿದ್ದಾರೆ ಹೇಳಿ. ಪ್ರಪಂಚದ ಟಾಪ್ 10 ಧನವಂತರಲ್ಲಿ ಅವರೂ ಒಬ್ಬರು. ಅವರು ಹಣಕ್ಕಿಂತಲೂ ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದಕ್ಕೆ ಪುರಾವೆ…ಅವರ ಬಲಗೈ ಹಾಗೂ ಎಡಗೈ ಬಂಟರಾಗಿರುವವರು ಅವರ ಇಬ್ಬರು ಗೆಳೆಯರೇ!. ಬನ್ನಿ ಆ ಇಬ್ಬರ ಗೆಳೆಯರ ಬಗ್ಗೆ ತಿಳಿದುಕೊಳ್ಳೋಣ.

ಆನಂದ್ ಜೈನ್ : ಇವರು ಮುಖೇಶ್ ಅಂಬಾನಿಯ ಬಾಲ್ಯ ಸ್ನೇಹಿತ. 6 ನೇ ತರಗತಿಯಿಂದ ಸಹಪಾಟಿಗಳು. ಆನಂದ್ ಜೈನ್ ಮುಖೇಶ್ ಅಂಬಾನಿಯವರಿಗೆ ಬಲಗೈ ಇದ್ದಹಾಗೆ. ಧೀರೂಭಾಯ್ ಅಂಬಾನಿ ಇವರನ್ನು ಮೂರನೇ ಮಗನಂತೆ ನೋಡಿಕೊಳ್ಳುತ್ತಿದ್ದರು. ತನ್ನ ಗೆಳೆಯನಿಗೆ ಮೊದಲಿಗೆ 15 ಕೋಟಿ ಸಂಬಳ ನೀಡಿ ತನ್ನ ಕಂಪೆನಿಯಲ್ಲಿ ಉದ್ಯೋಗ ನೀಡಿದರು. ನಂತರದ ದಿನಗಳಲ್ಲಿ ನಿರ್ಮಾಣ ವ್ಯವಹಾರದಲ್ಲಿ ತೊಡಗಿಸಿಕೊಂಡು ಇದೀಗ ಭಾರತದಲ್ಲಿ 50 ಪ್ರಮುಖ ಧನವಂತರಲ್ಲಿ ಒಬ್ಬರೆಂಬ ಖ್ಯಾತಿ ಪಡೆದಿದ್ದಾರೆ. ಇಂದಿಗೂ ಸಹ ಅಂಬಾನಿಯವರು ಆನಂದ ಜೈನ್ ರನ್ನು ತನ್ನ ಬಲಗೈ ಎಂದೇ ಭಾವಿಸುತ್ತಾರೆ.

ಮನೋಜ್ ಮೋದಿ : ಇವರು ಯಾವುದೇ ಪದಿವಿಯನ್ನು ಗಳಿಸದಿದ್ದರೂ, ಇಡೀ ರಿಲಯನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮುಖೇಶ್ ಅಂಬಾನಿಯವರಿಗೆ ಎಡಗೈ ಇದ್ದಹಾಗೆ. MM ಎಂದೇ ಹೆಸರುವಾಸಿಯಾಗಿರುವ ಇವರ ಮಾತಿನ ಶೈಲಿ, ಸಮಸ್ಯೆಗಳನ್ನು ಪರಿಷ್ಕರಿಸುವಲ್ಲಿ ತೋರುವ ಜಾಣತನ ಅಂಬಾನಿಯವರಿಗೆ ಬಹಳ ಇಷ್ಟ. ಈತ ಅಂಬಾನಿಯ ಇಂಜಿನೀರಿಂಗ್ ಗೆಳೆಯ. ಅಂದಿನಿಂದ ಇಂದಿನ ವರೆಗೂ ಇವರಿಬ್ಬರ ಗೆಳೆತನ ಮುಂದುವರೆದಿದೆ. ಮನೋಜ್ ಮೋದಿ ಸಂಬಳ ಸುಮಾರು 10 ಕೋಟಿ. ಇವರನ್ನು ಅತೀ ಶೀಘ್ರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ MD ಯನ್ನಾಗಿ ಮಾಡುತ್ತಾರೆಂಬ ಸುದ್ದಿ ಕೇಳಿಬರುತ್ತಿದೆ.

Comment here