Life StoryViral

14ನೇ ವಯಸ್ಸಿನಲ್ಲಿ ಕೌನ್ ಬನೇಗಾ ಕರೋಡ್’ಪತಿಯಲ್ಲಿ ಕೋಟಿ ಗೆದ್ದ ಹುಡುಗ ಈಗ ಪೋಲಿಸ್ ಅಧಿಕಾರಿ.!

ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಗುರಿಯನ್ನು ಹೊಂದಿರಬೇಕು. ಜೀವನದಲ್ಲಿ ಗುರಿ, ಮಹತ್ವಾಕಾಂಕ್ಷೆ ಇದ್ದರೆ ಅವನು ಜೀವನದಲ್ಲಿ ಮುಂದೆ ಬರುತ್ತಾನೆ. ತನ್ನ ಲಕ್ಷ್ಯವನ್ನು ಮಹತ್ವಾಕಾಂಕ್ಷೆಯ ಕಡೆ ಇಟ್ಟು ಕೆಲಸ ಮಾಡಿದರೆ ಯಶಸ್ಸು ಗ್ಯಾರಂಟಿ. ಈ ಸತ್ಯವನ್ನು ಅರಿತ ಒಬ್ಬ ಹುಡುಗ ಕೌನ್ ಬನೇಗ ಕರೋಡ್ ಪತಿ ಶೋನಲ್ಲಿ ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿ ಗೆದ್ದನು. ನಂತರ ಎಂಬಿಬಿಎಸ್ ಪೂರ್ತಿ ಮುಗಿಸಿದನು. ನಂತರ ಐಪಿಎಸ್ ಮುಗಿಸಿ ಈಗ ಜಿಲ್ಲೆಯಲ್ಲಿ ಎಸ್ ಪಿ ಆಗಿ ಕೆಲಸ ಮಾಡುತ್ತಿದ್ಧಾರೆ.

ರವಿ ಮೋಹನ್ ಸೈನಿ ರಾಜಸ್ಥಾನದ ಅಲ್ವಾರ್ ಪ್ರದೇಶದವರು. ವಿಶಾಖಪಟ್ಟಣದ ನೇವಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು.ಅವರ ತಂದೆ ನೇವಿ ಆಫಿಸರ್ ಆಗಿದ್ದ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದರು. ಅವರ 10 ನೇ ವಯಸ್ಸಿನಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ರವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಕೇಳಿದ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಒಂದು ಕೋಟಿ ಹಣವನ್ನು ಗೆದ್ದರು.

ನಂತರ ಇವರು ಜೈಪುರ್ ನ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ MBBS ಮುಗಿಸಿದರು. ತಂದೆಯವರ ಪ್ರೇರಣೆಯಿಂದ ಆದರೆ ಇವರಿಗೆ ಪೋಲಿಸ್ ಆಗಿ ಸೇವೆ ಮಾಡಬೇಕೆಂದು ಆಸೆ ಇತ್ತು. ಅದಕ್ಕೆ MBBS ಮುಗಿದ ತಕ್ಷಣ IPS ಆಗಲು ಪರೀಕ್ಷೆ ಬರೆದರು. ಪರೀಕ್ಷೆಯಲ್ಲಿ ಪಾಸ್ ಆದ ಅವರು ಐಪಿಎಸ್ ಆದರು. ರವಿ ಹೇಳುತ್ತಾರೆ , “ಕೌನ್ ಬನೇಗಾ ಕರೋಡ್ ಪತಿ ಕೇವಲ‌ ಕೋಟಿ ಕೊಟ್ಟಿಲ್ಲ, ಆತ್ಮ ವಿಶ್ವಾಸವನ್ನೂ ಕೊಟ್ಟಿತು”.

ಐಪಿಎಸ್ ತರಬೇತಿ ಪೂರ್ಣಗೊಳಿಸಿದ ನಂತರ, ರವಿ ಮೋಹನ್ ಸೈನಿ ಅವರು 2014 ರ ಗುಜರಾತ್ ಕೇಡರ್ ಐಪಿಎಸ್ ಆಗಿ ಸೇವೆ ಸಲ್ಲಿಸಿದರು. ಅವರು ರಾಜ್‌ಕೋಟ್ ನಗರ ಪೊಲೀಸ್ ವಲಯ 1 ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದರು. ಇತ್ತೀಚೆಗೆ ಅವರು ಪೋರ್ಬಂದರ್ ಜಿಲ್ಲೆಯ ಎಸ್‌ಪಿ ಆಗಿ ಬಡ್ತಿ ಪಡೆದರು. ಮೀಡಿಯದೊಂದಿಗೆ ಮಾತನಾಡಿದ ಅವರು ‘ನನ್ನ ತಂದೆ ನೇವಿ ಆಫಿಸರ್ ಆಗಿದ್ದು ಅವರ ಪ್ರೇರಣೆಯಿಂದ ನಾನು ಐಪಿಎಸ್ ಮುಗಿಸಿ‌ ಈಗ ಜಿಲ್ಲೆಯ ಎಸ್ ಪಿ ಆಗಿ ಜವಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಕರೋನಾ ಈಗ ಎಲ್ಲಾ ಕಡೆ ಹರಡಿರುವುದರಿಂದ ಜಿಲ್ಲೆಯ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಈಗ ಇಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ‘ ಎಂದಿದ್ದಾರೆ.

Watch Ravi’s KBC episode :

Comment here