ಎಟಿಎಂ. ಆಟೋಮೆಟೆಡ್ ಟೆಲ್ಲರ್ ಮೆಷಿನ್. ಎಲ್ಲಿಗೆ ಹೋದರೂ ಪ್ರತಿಯೊಬ್ಬರಿಗೂ ಉಪಯೋಗವಾಗುತ್ತಿರುವ ಈ ಸಾಧನ ಇಲ್ಲದೆ ನಮ್ಮ ದೈನಂದಿನ ಜೀವನ ಮುಂದಕ್ಕೆ ಸಾಗಲ್ಲ. ಆದರೆ ನಾವು ಬಳಸುತ್ತಿರುವ ಎಟಿಎಂ ಪಿನ್ ನಂಬರ್ ಕೇವಲ 4 ಅಂಕೆಗಳಲ್ಲೇ ಇರುತ್ತದೆ. ಆ ಪಿನ್ ನಂಬರ್ ಯಾಕೆ 4 ಅಂಕೆಗಳಲ್ಲಿ ಇರುತ್ತೋ ನೀವು ಯಾವತ್ತಾದರೂ ಯೋಚಿಸಿದ್ದೀರಾ? ನಮ್ಮ ಇಮೇಲ್, ಇಲ್ಲಾ ಸಾಮಾಜಿಕ ತಾಣಗಳಿಗಾದರೆ 6 ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಗಳನ್ನು ಪಾಸ್ವರ್ಡ್ ಆಗಿ ಉಪಯೋಗಿಸಿಕೊಳ್ಳುತ್ತೇವೆ. ಯಾಕಂದರೆ ಸೆಕ್ಯುರಿಟಿ ಕಾರಣದಿಂದ ಈ ಪಾಸ್ವರ್ಡ್ಸ್, ಪಿನ್ ನಂಬರ್ಗಳನ್ನು ನಮ್ಮ ಭದ್ರತೆಗಾಗಿ ಬಳಸುತ್ತೇವೆ. ಆ ರೀತಿಯಾಗಿ ಪ್ರತಿ ನಿತ್ಯ ಬೇಕಾಗುವ ಹಣಕ್ಕಾಗಿ ಇನ್ನೆಷ್ಟು ಜಾಗ್ರತೆಯಾಗಿ ಇರಬೇಕು. ಎಟಿಎಂ ಪಿನ್ ನಂಬರ್ 4 ಅಂಕೆಗಳಲ್ಲಿ ಇರಲು ಕಾರಣ ಇಲ್ಲದಿಲ್ಲ.
1967ರಿಂದ ಬಳಕೆಯಲ್ಲಿರುವ ಎಟಿಎಂಗಳನ್ನು ಸ್ಕಾಟ್ಲೆಂಡ್ ಮೂಲದ ಜಾನ್ ಆಡ್ರಿಯನ್ ಶೆಪರ್ಡ್ ಬಾರ್ ಕಂಡುಹಿಡಿದ. ಈಗ ಪ್ರಪಂಚದಾದ್ಯಂತ ಎಟಿಎಂ ಕೇಂದ್ರಗಳಿವೆ. ಅವರು ಕಂಡುಹಿಡಿದ ಎಟಿಎಂಗಳಿಗಿಂತ ಸ್ವಲ್ಪ ಅಡ್ವಾನ್ಸ್ಡ್ ಮೆಷಿನ್ಸ್ ಈಗ ಬಳಕೆಯಲ್ಲಿವೆ. ಜಾನ್ ಆಡ್ರಿಯನ್ ಕಂಡುಹಿಡಿದ ಈ ಮೆಷಿನ್ನಲ್ಲಿನ ಹಣವನ್ನು ಇತರರಿಗೆ ಗೊತ್ತಾಗದಂತೆ ಇರಲು, ಭದ್ರತೆಗಾಗಿ ಪಿನ್ ನಂಬರ್ ಇಟ್ಟಿದ್ದನಂತೆ. ಮೊದಲು 6 ಅಂಕೆಗಳ ಪಿನ್ ನಂಬರ್ ಫಿಕ್ಸ್ ಮಾಡಿದ. ಅಷ್ಟು ಅಂಕೆಗಳನ್ನು ಜ್ಞಾಪಕ ಇಟ್ಟುಕೊಳ್ಳುವುದು ಕಷ್ಟ ಎಂದು, ಬಹಳಷ್ಟು ಮಂದಿ ಅಷ್ಟುದ್ದದ ಸಂಖ್ಯೆ ಜ್ಞಾಪಕ ಇಟ್ಟುಕೊಳ್ಳುವುದಿಲ್ಲ ಎಂದು ಆತನ ಹೆಂಡತಿ ವಾದಿಸಿದಳಂತೆ. ಆ ಬಳಿಕ ನಗುತ್ತಾ 4 ಅಂಕೆಗಳ ಪಿನ್ ನಂಬರ್ ಆದರೆ ಬೆಟರ್ ಎಂದು ಸೂಚಿಸಿದ ಮೇಲೆ, 6 ಅಂಕೆಗಳಿಗೆ ಬದಲಾಗಿ 4 ಅಂಕೆಗಳಿಗೆ ಬದಲಾಯಿಸಿದನಂತೆ. ಆಂಡ್ರಿಯನ್ ಹೆಂಡತಿ ತುಂಬಾ ಖುಷಿಪಟ್ಟಳಂತೆ. ಬಹಳಷ್ಟು ಬ್ಯಾಂಕ್ಗಳು 4 ಅಂಕೆಗಳ ಪಿನ್ ನಂಬರ್ ಕೊಡುತ್ತಿವೆ, ಇನ್ನೂ ಕೆಲವು ಬ್ಯಾಂಕ್ಗಳು ಈಗಲೂ 6 ಅಂಕೆಗಳ ಪಿನ್ ನಂಬರ್ ಕೊಡುತ್ತಿವೆ. ಎನಿ ವೇ ಎಟಿಎಂ ಪಿನ್ ಯಾರಿಗೂ ಹೇಳಬೇಡಿ. ಮರೀದೆ ಜ್ಞಾಪಕದಲ್ಲಿಟ್ಟುಕೊಳ್ಳಿ.
Comment here