Information

ಭಾರತ್ ಮಾತಾಕೀ ಜೈ’ ಎಂದು ಹೇಳುತ್ತಿರುತ್ತೇವಲ್ಲವೇ? ಅಸಲಿಗೆ ಆ ಪರಿಕಲ್ಪನೆ ಬಂದದ್ದಾದರೂ ಹೇಗೆ?

ನಮ್ಮ ದೇಶದಲ್ಲಿ ಸ್ತ್ರೀ ರೂಪದಲ್ಲಿರುವ ಶಕ್ತಿಯನ್ನು ದೇವತೆಯಾಗಿ ಆರಾಧಿಸುತ್ತೇವೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳೆಂದು ಗರ್ವದಿಂದ ಹೇಳುತ್ತೇವೆ. ಭಾರತ್ ಮಾತಾಕೀ ಜೈ ಎಂದರೆ…ಅದೊಂದು ರಣ ಭೇರಿಯಂತೆ. ನಮ್ಮ ತಾಯಿಯ ರೂಪದಲ್ಲಿರುವ ದೇಶಕ್ಕೆ ಗೌರವ ನೀಡಿದಂತೆ. ಆದರೆ, ಈ ಘೋಷಣೆ 1905 ರಲ್ಲಿ ಪ್ರಾರಂಭವಾಯಿತು. ಅಂದಿನ ಬೆಂಗಾಲ್ ನಲ್ಲಿ ಬ್ರಿಟಿಷರು ಹಿಂದು, ಮುಸ್ಲಿಮರನ್ನು ಬೇರೆಯಾಗಿಸಿ’ ಡಿವೈಡ್ ಅಂಡ್ ರೂಲ್’ ಎನ್ನುವಂತೆ ನಮ್ಮನ್ನು ಆಳಬೇಕೆಂದುಕೊಳ್ಳುತ್ತಿದ್ದರು. ಇದೇ ಕಾರಣದಿಂದಾಗಿ ‘ ಭಾರತ್ ಮಾತಾಕಿ ಜೈ’ ಎಂಬ ಘೋಷಣೆ ಹುಟ್ಟಿಕೊಂಡಿತು. ಕವಿ ರವೀಂದ್ರನಾಥ್ ಟಾಗೂರ್ ಸೋದರಳಿಯ ‘ಅಬನೀಂದ್ರನಾಥ್ ಟಾಗೂರ್ ‘ ರಚಿಸಿದ ‘ಭಾರತ ಮಾತೆಯ’ ವರ್ಣ ಚಿತ್ರವೇ ಪ್ರಮುಖ ಕಾರಣವಾಯಿತು. ಇದರ ಆವಿಷ್ಕರಣೆಯ ಹಿಂದೆ ಒಂದು ಅದ್ಭುತವಾತ ಕತೆ ಅಡಗಿದೆ.

1905 ರಲ್ಲಿ ಅಂದಿನ ಭಾರತ ದೇಶದ ವೈಸ್ ರಾಯ್ ಆಗಿದ್ದಂತಹ ‘ ಲಾರ್ಡ್ ಕರ್ಜನ್’ ಹಿಂದೂ ಹಾಗೂ ಮುಸ್ಲಿಮರನ್ನು ಧರ್ಮದ ನೆಲೆಯನ್ನು ವಿಭಜಿಸಿ, ಬೇರೆ ಬೇರೆ ಪ್ರದೇಶಗಳಲ್ಲಿ ಅವರನ್ನಿರಿಸಿ ಆಳಬೇಕೆಂದು ಯೋಚಿಸಿದ್ದ. ಇದರ ಹಿಂದಿರುವ ‘ ಡಿವೈಡ್ ಅಂಡ್ ರೂಲ್’ ಷಡ್ಯಂತ್ರ ಪ್ರಜೆಗಳಿಗೆ ಅರಿವಿಗೆ ಬಂದಿತು. ಇದರಿಂದಾಗಿ ಭಾರತ ಸ್ವಾತಂತ್ರ್ಯ ಹೋರಾಟ ಆ ಪ್ರದೇಶದಲ್ಲಿ ಚುರುಕುಗೊಂಡಿತು. 1875 ರಲ್ಲಿ ‘ ಬಂಕಿಂ ಚಂದ್ರ ಚಟರ್ಜಿ’ ರಚಿಸಿದ ‘ವಂದೇ ಮಾತರಂ’ ನಿಂದ ಪ್ರೇರೇಪಿತರಾಗಿ ‘ಭಾರತ ಮಾತೆ’ ಯನ್ನು ವರ್ಣಿಸುತ್ತಾ ಅಬನೀಂದ್ರನಾಥ್ ಟಾಗೂರ್ ಆ ದೇವತೆಗೆ ಒಂದು ರೂಪ ನೀಡಿದರು. ಈರೀತಿಯಾಗಿ ಭಾರತ ಮಾತೆಯ ಚಿತ್ರ ಜನ್ಮತಾಳಿತು. ಆ ಚಿತ್ರದಲ್ಲಿ ಕಾವಿ ವಸ್ತ್ರಗಳನ್ನು ದರಿಸಿರುವ ದೇವತೆಗೆ ನಾಲಕ್ಕು ಕೈಗಳಿದ್ದವು. ಕೈಗಳಲ್ಲಿ ಪುಸ್ತಕ, ಭತ್ತದ ತೆನೆ, ಹೂಮಾಲೆ ಹಾಗೂ ಶ್ವೇತ ವಸ್ತ್ರವನ್ನು ಹಿಡಿದಿದ್ದಳು.

ಆ ವರ್ಣಚಿತ್ರವನ್ನು ನೋಡಿದ ಸ್ವಾಮಿ ವಿವೇಕಾನಂದರ ಶಿಷ್ಯೆ ‘ನಿವೇದಿತಾ’, ಅದರಲ್ಲಿ ಯಾವುದೋ ಒಂದು ಶಕ್ತಿ ಅಡಗಿರುವುದನ್ನು ಮನಗಂಡಳು. ಹಾಗಾಗಿ ಭಾರತ ಮಾತೆಯ ಆ ವರ್ಣಚಿತ್ರದ ಪೋಸ್ಟರನ್ನು ಅಚ್ಚುಹಾಕಿಸಿ, ಬೆಂಗಾಲ್ ನ ಎಲ್ಲೆಡೆಯಲ್ಲೂ ಪ್ರಚಾರ ಸಿಗುವಂತೆ ಮಾಡಿದರು. ಗೋಡೆಗಳ ಮೇಲೆ ಅಂಟಿಸಿದರು. ಬ್ಯಾನರ್ ಗಳನ್ನು ಕಟ್ಟಿಸಿದರು.ಇದರಿಂದಾಗಿ 1909 ವರೆಗೂ ಭಾರತ ಮಾತೆಯ ಚಿತ್ರಕ್ಕೆ ಭಾರತದೆಲ್ಲೆಡೆ ಪ್ರಚಾರ ದೊರೆಯಿತು.ಅದರ ಭಾಗವಾಗಿಯೇ ‘ಉತ್ತರ ಪ್ರದೇಶ’ದಲ್ಲಿ ಭಾರತ ಮಾತೆಯ ಚಿತ್ರದೊಂದಿಗೆ’ ಭಾರತ ಮಾತಾಕೀ ಜೈ’ ಎಂದು ಹೇಳುತ್ತಾ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು.ಮದ್ರಾಸ್ ನಲ್ಲಿಯೂ ಸಹ ನಿವೇದಿತಾ ಶಿಷ್ಯರು ಈ ಚಿತ್ರಕ್ಕೆ ವಿಸ್ತೃತವಾದ ಪ್ರಚಾರ ನೀಡಿದರು. ಬಾಂಬೆ, ಪಂಜಾಬ್ ಗಳಲ್ಲಿಯೂ ಲೋಕಮಾನ್ಯ ತಿಲಕ್, ಲಾಲಾ ಲಜಪತ್ ರಾಯ್ ಭಾರತ ಮಾತೆಯ ಚಿತ್ರವನ್ನಿರಿಸಿಕೊಂಡು ಸ್ಯಾಂತಂತ್ರ್ಯ ಸಂಗ್ರಾಮ ನಡೆಸಿದರು. ಈರೀತಿಯಾಗಿ ಭಾರತ ಮಾತೆಯ ಚಿತ್ರ, ಭಾರತ ಮಾತಾಕೀ ಜೈ’ ಎಂಬ ಘೋಷಣೆಯೊಂದಿಗೆ ದೇಶದೆಲ್ಲೆಡೆ ಹರಡಿತು.

1918 ರಲ್ಲಿ ಬನಾರಸ್ ನಲ್ಲಿ ಭಾರತ ಮಾತೆಯ ದೇವಾಲಯವನ್ನು ನಿರ್ಮಿಸಿದಾಗ…. ಅದನ್ನು ಮಹಾತ್ಮ ಗಾಂಧೀ, ಸರ್ದಾರ್ ಪಟೇಲ್,ಅಬ್ದುಲ್ ಗಫಾರ್ ಖಾನ್ ಮೊದಲಾದವರು ಉದ್ಘಾಟಿಸಿದರು.

ಕಾಲಕ್ರಮೇಣ ನಮಗೆ ಸ್ಯಾತಂತ್ರ್ಯ ತಂದುಕೊಟ್ಟ ಗಾಂಧಿ, ನೆಹರು, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್ ಮೊದಲಾದ ನಾಯಕರುಗಳು ಭಾರತ ಮಾತೆಯ ಚಿತ್ರಪಟವನ್ನು ಪೂಜಿಸತೊಡಗಿದರು. ಆದರೆ, ಕೊಲ್ಕತ್ತಾದ ರವೀಂದ್ರ ಭಾರತಿ ಸೊಸೈಟಿಗೆ ಸೇರಿದ ಸಂಗ್ರಹಗಳಲ್ಲಿ, ಅಂದು ಅಬನೀಂದ್ರ ಠಾಗೂರ್ ರಚಿಸಿದಂತಹ ಭಾರತ ಮಾತೆಯ ಮೂಲ ವರ್ಣಚಿತ್ರವನ್ನು ನಾವು ಇಂದಿಗೂ ನೋಡಬಹುದಾಗಿದೆ. ಈರೀತಿಯಾಗಿ ದೇಹದ ಒಂದು ಭಾಗವನ್ನಾಗಿ ನಾವು ಭಾರತ ಮಾತೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ.

Comment here