Information

ರೈಲ್ವೆ ನಿಲ್ದಾಣದಲ್ಲಿ ರೈಲು ಬರುವ ಸಮಯದಲ್ಲಿ ಹಳದಿ ರೇಖೆಯನ್ನು ದಾಟಬೇಡಿ!

ರೈಲು ನಿಲ್ದಾಣಗಳಲ್ಲಿ ಲೈನ್ ಎಳೆದಿರುವುದನ್ನು ನೋಡಿರುತ್ತೀರಿ. ಕೆಲವು ಗಜಗಳಷ್ಟು ದೂರದ ಅಂತರದಲ್ಲಿ ಲೈನ್ ಗಳನ್ನು ಎಳೆದಿರುತ್ತಾರೆ. ಕೆಲವು ಕಡೆ ಹಳದಿ ಬಣ್ಣ, ಇನ್ನೂ ಕೆಲವು ಕಡೆ ಬಿಳಿ ಬಣ್ಣದ ಪಟ್ಟಿ ಎಳೆದಿರುತ್ತಾರೆ. ಪ್ರಯಾಣಿಕರು ಆ ಗೆರೆ ದಾಟಿ ರೈಲು ಬಂದಾಗ ಹತ್ತಲು ರೆಡಿಯಾಗಿರುತ್ತಾರೆ.

ಇನ್ನು ಮುಂದೆ ಅಂತಹ ತಪ್ಪನ್ನು ಮಾಡಬೇಡಿ…. ಹಾಗೆ ಮಾಡುವುದು ಜೀವವನ್ನು ಪಣಕ್ಕಿಟ್ಟಂತೆ
ವೇಗವಾಗಿ ಚಲಿಸುವ ರೈಲು ಮುಂಭಾಗದಲ್ಲಿ ಸಾಕಷ್ಟು ಒತ್ತಡವನ್ನು ಬೀರುತ್ತದೆ. ನೀವು ನಿಂತಿರುವ ಪ್ರದೇಶವು ಕಡಿಮೆ ಒತ್ತಡ ಹೊಂದರುತ್ತದೆ. ಸ್ವಯಂಚಾಲಿತವಾಗಿ ನಿಮ್ಮ ಹಿಂದಿನಿಂದ ಬಲವನ್ನು ಹೆಚ್ಚಿನ ಒತ್ತಡಕ್ಕೆ ತಳ್ಳುತ್ತದೆ.ಇದರಿಂದ ನೀವು ರೈಲಿಗೆ ಡಿಕ್ಕಿ ಹೊಡೆಯಬಹುದು ಅಥವಾ ರೈಲಿನ ಅಡಿಗೆ ಬೀಳುವ ಸಂಭವ ಹೆಚ್ಚಿರುತ್ತದೆ.

ಶಾಲೆಯಲ್ಲಿ ನೀವು ಬರ್ನೌಲಿ ಸೂತ್ರ ಓದಿರಬಹುದು. ಅದರ ಪ್ರಕಾರ ಫ್ಯಾನ್ ಜೋರಾಗಿ ತಿರುಗುತ್ತಿದ್ದರೆ ಗೋಡೆಗೆ ಅಂಟಿಕೊಂಡಿರುವ ಕ್ಯಾಲೆಂಡರ್ ಫ್ಯಾನ್ ಕಡೆ ವಾಲುತ್ತದೆ. ಅದೇ ರೀತಿಯಲ್ಲಿ ಲೈನ್ ನಲ್ಲಿ ಇದ್ದರೆ ಟ್ರೈನ್ ಬರುತ್ತಿದ್ದಾಗಾದರ ಕಡೆ ವಾಲುತ್ತೀರ !

 

Comment here