Story PicViral

ವಾಟ್ಸಪ್ ನಲ್ಲಿ ಶೇರ್ ಆದ ಈ ಫೋಟೋ ಹಿಂದಿನ ಅಸಲಿ ಕತೆ

ಈ ಫೋಟೋ ಬೆಳಿಗ್ಗೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಲಾಕ್ ಡೌನ್ ನಂತರ ಮೊದಲ ಬಾರಿಗೆ ರೈಲು ಓಡಿಸುವ ಪತಿಯ ಬಗ್ಗೆ ಜಾಗರೂಕರಾಗಿರುವ ಪತ್ನಿ ಫೋಟೋ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಈ ಸುದ್ದಿ ನಕಲಿ… .ಇದು ಕಳೆದ ವರ್ಷ ರಾಖಿ ಹುಣ್ಣಿಮೆಯ ದಿನದಂದು ತೆಗೆದ ಚಿತ್ರ ಆಗಿತ್ತು.

ಈ ಫೋಟೋದಲ್ಲಿರುವುದು ಗಂಡ ಹೆಂಡತಿ ಅಲ್ಲ. ಅಕ್ಕ ತಮ್ಮ. ರಾಕಿ ಹಬ್ಬದ ದಿನ ರಾಕಿ ಕಟ್ಟಲು ತಮ್ಮನ ಮನೆಗೆ ಬಂದರೆ ತಮ್ಮ ಮನೆಗೆ ಇರದೇ ಡ್ಯೂಟಿಯಲ್ಲಿದ್ದಾನೆ ಎಂದು ತಿಳಿಯುತ್ತದೆ. ಭಾರತೀಯ ರೈಲ್ವೆಯಲ್ಲಿ ಲೋಕೋ ಪೈಲಟ್ ಆಗಿರುವ ಆತನು ಆ ದಿನ ಮಧ್ಯಪ್ರದೇಶದಲ್ಲಿ ಇಟಾರ್ಸಿ-ಬಸಾವಲ್ ಮಾರ್ಗ ರೈಲು ಓಡಿಸುತ್ತಿದ್ದರು. ಈ ಎರಡು ಮಾರ್ಗಗಳ ನಡುವೆ ಬುರ್ಹಾನ್ಪುರದಲ್ಲಿ ರೈಲು 2 ನಿಮಿಷಗಳ ಕಾಲ ನಿಲ್ಲುತ್ತದೆ ಎಂದು ತಿಳಿಯುತ್ತದೆ. ಅಕ್ಕ ಸೀದಾ ರೈಲು ನಿಲ್ದಾಣಕ್ಕೆ ಬಂದು ತಮ್ಮನಿಗೆ ರಾಕಿ ಕಟ್ಟುತ್ತಾಳೆ. ಆ ಕ್ಷಣದಲ್ಲಿ ತೆಗೆದ ಫೋಟೋ ಇದು.

Comment here