Lifestyle

ಹೆರಿಗೆಗಾಗಿ ಮಡದಿಯನ್ನು ಭಾರತ ದೇಶಕ್ಕೆ ಕಳುಹಿಸಿದ ಗಂಡ… ಆದರೆ,ಕೊನೆಗೆ ಏನಾಯಿತೆಂದು ತಿಳಿದರೆ….ನಿಮ್ಮ ಕಣ್ಣುಗಳು ಒದ್ದೆಯಾಗುತ್ತವೆ!

ಕೊರೊನಾ ಮಹಾಮಾರಿ ಇಡೀ ಪ್ರಪಂಚವನ್ನೇ ನಡುಗಿಸಿಬಿಟ್ಟಿದೆ. ಲಾಕ್ ಡೌನ್ ‘ನಿಂದಾಗಿ ಎಲ್ಲಿದ್ದವರು ಅಲ್ಲಿಯೇ ಸಿಕ್ಕಿಹಾಕಿಕೊಂಡಿರುವ ವಿಷಯ ನಮಗೆ ತಿಳಿದಿರುವಂತದ್ದೇ. ವಿದೇಶಗಳಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು’ವಂದೇ ಭಾರತ್ ಮಿಷನ್’ಅನ್ನು ಭಾರತ ಸರಕಾರ ಆಯೋಜಿಸಿದೆ. ದುಬಾಯ್ ನಲ್ಲಿರುವ ತನ್ನ ಮಡದಿಯನ್ನು ಆಕೆಯ ಗಂಡ ಭಾರತಕ್ಕೆ ಕಳುಹಿಸಿದರು.ನಂತರ ಹೃದಯಾಘಾತದಿಂದ ಮರಣಿಸಿದರು. ಎಲ್ಲರ ಕಣ್ಣಲ್ಲಿ ನೀರುತರಿಸಿದ ಈ ಘಟನೆಯ ವಿವರಗಳನ್ನು ನೋಡುವುದಾದರೆ…

ನಿತಿನ್ ಚಂದ್ರನ್(28) ಮೂಲತ: ಕೇರಳದವರು. ದುಬಾಯ್ ನಲ್ಲಿ ಒಂದು ನಿರ್ಮಾಣ ಸಂಸ್ಥೆಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಕೆಯ ಮಡದಿ ಅತಿರಾ ಗೀತಾ ಶ್ರೀಧರನ್(27).ಪ್ರಸ್ತುತ ಆಕೆ ಈಗ 8 ತಿಂಗಳ ಗರ್ಭಿಣಿ. ಹೆರಿಗೆಗೆಂದು ತನ್ನ ಮಡದಿಯನ್ನು ಚಂದ್ರನ್ ಕೇರಳದಲ್ಲಿರುವ ತನ್ನ ಮನೆಗೆ ‘ ವಂದೇ ಭಾರತ್ ಮಿಷನ್’ ಮೂಲಕ ಭಾರತಕ್ಕೆ ಕಳುಹಿಸಿದರು. ಗೀತಾ ಮೇ7ರಂದು ದುಬಾಯ್ ನಿಂದ ಭಾರತಕ್ಕೆ ಬಂದರು. ಕೆಲಸದ ಒತ್ತಡದಿಂದಾಗಿ ಚಂದ್ರನ್ ಅಲ್ಲೇ ಇದ್ದರು.

ಜುಲೈ ತಿಂಗಳಲ್ಲಿ ಗೀತಾ ಳ ಹೆರಿಗೆ ಆಗಲಿತ್ತು. ಆದರೆ, ಅಷ್ಟರಲ್ಲೆ ಊಹಿಸಲಾಗದ ದುರ್ಘಟನೆ ನಡೆಯಿತು. ಗಲ್ಫ್ ಸುದ್ದಿಯ ಪ್ರಕಾರ…… ಚಂದ್ರನ್ ಸೋಮವಾರ ರಾತ್ರಿ ನಿದ್ರೆಯಲ್ಲಿರುವಾಗ, ಅಧಿಕ ರಕ್ತದೊತ್ತಡದಿಂದಾಗಿ ಮರಣಿಸಿದರು. ಈ ವಿಷಯವನ್ನು ವೈದ್ಯರು ದೃಢೀಕರಿಸಿರುವುದಾಗಿ ಚಂದ್ರನ್ ಗೆಳೆಯರು ಹೇಳಿದರು. ಈ ವಿಷಯವನ್ನು ತಿಳಿದ ಚಂದ್ರನ್ ಕುಟುಂಬದ ಸದಸ್ಯರು ಆಘಾತಗೊಂಡರು. ಕೆಲವೇ ದಿನಗಳಲ್ಲಿ ತಂದೆಯಾಗಿ ಸಂತಸ ಪಡಬೇಕಾದ ಸಮಯದಲ್ಲಿ ಈರೀತಿ ನಡೆದಿರುವುದು ವಿಷಾದಕರ.

Comment here