Life StoryStory Pic

ಫೋಟೊ ಹಿಂದಿರುವ ಘಟನೆ – ಜಯಲಲಿತ ಶಪಥ !

ಅದು 1989 ನೇ ಇಸವಿ… ತಮಿಳುನಾಡು ಮುಖ್ಯಮಂತ್ರಿ ಬಜೆಟ್ ಭಾಷಣ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ…ನೀವು ನೀಡುತ್ತಿರುವುದೆಲ್ಲವೂ ಸುಳ್ಳು ಆಶ್ವಾಸನೆಗಳು…ಕೇವಲ ಕಾಗಗದದ ಮೇಲಿನ ಅಂಕೆ ಸಂಖೆಗಳು ಎಂದು ಪ್ರತಿಪಕ್ಷ ನಾಯಕಿ ಜಯಲಲಿತ, ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದಾರೆDMK ಪಕ್ಷದ ನಾಯಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.ಕ್ರಮೇಣ ಜಗಳಕ್ಕೆ ಕಾರಣವಾಯಿತು. ಈ ನಿಟ್ಟಿನಲ್ಲಿ ಜಯಲಲಿತ ಮೇಲೆ ದಾಳಿ ನಡೆಯುತ್ತದೆ. ಹರಿದ ಸೀರೆಯೊಂದಿಗೆ ಶಾಸನಸಭೆ ಯಿಂದ ಹೊರಹೋಗುತ್ತಾ…ನಾನಿನ್ನು ಮುಖ್ಯಮಂತ್ರಿಯಾಗಿಯೇ ಈ ಸಭೆಯನ್ನು ಪ್ರವೇಶಿಸುತ್ತೇನೆ ಎಂದು ಶಪಥ ಮಾಡುತ್ತಾರೆ ಜಯಲಲಿತ.

ಊಹಿಸಿದಂತೆ 1991 ರ ಚುನಾವಣೆಯಲ್ಲಿ ಜಯಲಲಿತ ನಾಯಕತ್ವದ AIADMK ಪಕ್ಷ 234 ಸ್ಥಾನಗಳ ಪೈಕಿ 225 ಸ್ಥಾನಗಳನ್ನು ತನ್ನದಾಗಿಸಿಕೊಂಡು ಅಧಿಕಾರಕ್ಕೆ ಬರುತ್ತದೆ. ಜಯಲಲಿತ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ. ತಾನು ಮಾಡಿದ ಶಪಥದ ಪ್ರಕಾರವೇ ಮುಖ್ಯಮಂತ್ರಿಯಾಗಿ ಶಾಸನ ಸಭೆಗೆ ಕಾಲಿಡುತ್ತಾರೆ

Comment here