HistoryInformation

ನಮ್ಮ ದೇಶದ 2ನೇ ಪ್ರಧಾನಿ ಮರಣ ಇಂದಿಗೂ ನಿಗೂಢವೇ!… ಮಗಳೊಂದಿಗೆ ಫೋನ್ ಸಂಭಾಷಣೆ,ಡಾಕ್ಟರ್ ಮರಣ,ಆಪ್ತ ಸಹಾಯಕನ ಅಪಘಾತ! ಎಲ್ಲವೂ ಒಂದು ಸಿನಿಮಾದಂತೆ ಜರುಗಿದವು.

ಲಾಲ್ ಬಹದ್ದೂರ್ ಶಾಸ್ರ್ತಿ…ಶಾಂತಿಗಾಗಿ… ಸವಾಲ್ ಗಾಗಿ…ಯಾವುದೇ ವಿಷವಾಗಲಿ ಅವರಿದ್ದರೆ ಸಾಕು ಕತೆ ಮುಗಿದಂತೆಯೇ. ಆಡಳಿತದಲ್ಲಿ ಯಾವುದೇ ಕಪ್ಪುಚುಕ್ಕೆ ಹೊಂದಿರದ ಪ್ರಧಾನಿಯಾಗಿ, ದೇಶದ ಅಭಿವೃದ್ಧಿಯನ್ನೇ ತನ್ನ ಧ್ಯೇಯವನ್ನಾಗಿಸಿಕೊಂಡು ಅವಿರತವಾಗಿ ದುಡಿದ ಪ್ರಧಾನಿಗಳ ಸಾಲಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲಿಗರು.

ವಿದೇಶದಲ್ಲಿ ಮರಣವನ್ನಪ್ಪಿದ ಮೊದಲ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ರ್ತಿ, 1964 ರಲ್ಲಿ ಪಾಕ್ ಮತ್ತು ಭಾರತದ ನಡುವೆ ಯುದ್ಧ ನಡೆಯುತ್ತಿದೆ,ಅದಾಗಲೇ ಭಾರತ ಗೆಲುವನ್ನು ಸಾಧಿಸುವ ಕೊನೆಯ ಹಂತದಲ್ಲಿದೆ ಸಂಯುಕ್ತ ರಾಷ್ಟ್ರಗಳ ಸಮಿತಿ ನೀಡಿದ ಯುದ್ಧ ವಿರಮಿಸುವ ಒಪ್ಪಂದದ ಆಹ್ವಾನದ ಮೇರೆಗೆ ಶಾಸ್ತ್ರಿಯವರು ‘ತಾಷ್ಕೆಂಟ್ ‘ ಗೆ ತೆರಳುತ್ತಾರೆ. ಅಲ್ಲಿ ಪಾಕ್ ಅಧ್ಯಕ್ಷ ಅಯೂಬ್ ಖಾನ್ ನೊಂದಿಗೆ ಒಪ್ಪಂದಕ್ಕೆ ಸಹಿ ಮಾಡುತ್ತಾರೆ. ಹಾಗೆ ಸಹಿ ಮಾಡಿದ ಮಾರನೇ ದಿನವೇ ಅವರು ಮರಣಿಸುತ್ತಾರೆ.


ಅವರ ಶರೀರದ ತುಂಬಾ ಗಾಯಗಳಾಗಿವೆ, ಶರೀರ ನೀಲಿ ಬಣ್ಣಕ್ಕೆ ತಿರುಗಿದೆ. ನನ್ನ ಪತಿಯ ಮೇಲೆ ವಿಷ ಪ್ರಯೋಗ ನಡೆದಿದೆ ಎಂದು ಲಾಲ್ ಬಹದ್ದೂರ್ ಶಾಸ್ರ್ತಿಯವರ ಮಡದಿ ಲಲಿತಾ ಆರೋಪಿಸುತ್ತಾರೆ.ಲಾಲ್ ಬಹದ್ದೂರ್ ಶಾಸ್ರ್ತಿ ಮರಣದ ಬಗ್ಗೆ ನಿಯಮಿಸಲಾದ ಕಮಿಟಿಯ ವರದಿ ಇಂದಿನ ವರೆಗೂ ಬಂದಿಲ್ಲ.

ಮಗಳೊಂದಿಗೆ ಫೋನ್ ಮೂಲಕ ಸಂಭಾಷಣೆ:
ಹೃದಯಾಘಾತದಿಂದ ಮರಣಿಸುವುದಕ್ಕೂ ಮುನ್ನ ಲಾಲ್ ಬಹದ್ದೂರ್ ಶಾಸ್ರ್ತಿ ಯವರು ತನ್ನ ಪುತ್ರಿ ಸುಮನ್ ರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ… ಹಾಲು ಕುಡಿದು ಮಲಗುವುದಾಗಿ ಹೇಳಿದರು. ಅದೇ ಸಮಯದಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಿತು. ನಂತರ ಸುಮಾರು 15 ನಿಮಿಷಗಳ ಕಾಲ ಸುಮನ್ ಪ್ರಯತ್ನಿಸಿದರು. ನಂತರ ಸಂಪರ್ಕ ದೊರೆತರೂ ಲಾಲ್ ಬಹದ್ದೂರ್ ಶಾಸ್ರ್ತಿ ಫೊನ್ ಸ್ವೀಕರಿಸದೆ, ಸೋವಿಯಟ್ ಅಧಿಕಾರಿಯೊಬ್ಬರು ಫೋನ್ ಸ್ವೀಕರಿಸಿದರು. ನಿಮ್ಮ ತಂದೆಯವರು ಇದೀಗ ತಾನೇ ಮರಣಿಸಿದರು ಎಂಬ ಸುದ್ದಿಯನ್ನು ನೀಡಿದರು. ಆರೋಗ್ಯವಾಗಿದ್ದವರು ಒಮ್ಮೆಲೇ ಹೃದಯಾಘಾತದಿಂದ ಮರಣಿಸಿದರೆನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ.

ಖಾಸಗಿ ವೈದ್ಯರ ಮರಣ:
ಶಾಸ್ರಿಯವರೊಂದಿಗೆ ಅವರ ಖಾಸಗಿ ವೈದ್ಯ RN ಚುಗ್ ಸಹ ತಾಷ್ಕೆಂಟ್ ಗೆ ತೆರಳಿದ್ದರು. ಅವರು ಪಕ್ಕದ ಕೋಣೆಯಲ್ಲಿದ್ದರು. ಕೊನೇಪಕ್ಷ ಲಾಲ್ ಬಹದ್ದೂರ್ ಶಾಸ್ರ್ತಿ ಯವರಿಗೆ ಹೃದಯಾಘಾತವಾಗಿರುವ ವಿಷಯವನ್ನು ಅವರಿಗೂ ಸಹ ಸೋವಿಯತ್ ಅಧಿಕಾರಿಗಳು ತಿಳಿಸಲಿಲ್ಲ. ಮರಣಿಸಿದ ನಂತರವೇ ತಿಳಿಸಿದರು. 1977 ರಲ್ಲಿ ಲಾಲ್ ಬಹದ್ದೂರ್ ಶಾಸ್ರ್ತಿ ಯವರ ಅನುಮಾನಾಸ್ಪದ ಮರಣದ ಬಗ್ಗೆ ತನಿಖಾ ತಂಡದ ಮುಂದೆ ತನ್ನ ಹೇಳಿಕೆಯನ್ನು ನೀಡಲು ಕಾರಿನಲ್ಲಿ ದೆಹಲಿಗೆ ಹೊರಟಿದ್ದ RN ಚುಗ್ ರವರ ಕಾರಿಗೆ ಎದುರಿನಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಚುಗ್ ಸ್ಥಳದಲ್ಲಿಯೇ ಮೃತಪಟ್ಟರು.

ಆಪ್ತ ಸಹಾಯಕನ ಅಪಘಾತ:
ಲಾಲ್ ಬಹದ್ದೂರ್ ಶಾಸ್ರ್ತಿಯವರ ಆಪ್ತ ಸಹಾಯಕ ರಾಮನಾಥ್ ಸಹ ಅವರೊಂದಿಗೆ ತಾಷ್ಕೆಂಟ್ ಗೆ ಹೋಗಿದ್ದರು. ತನಿಖಾ ತಂಡದ ಎದುರು ಹೇಳಿಕೆ ನೀಡಲು ಅವರನ್ನೂ ಸಹ ಆಹ್ವಾನಿಸಲಾಗಿತ್ತು. ಹೇಳಿಕೆ ನೀಡಲು ತನ್ನ ಮನೆಯಿಂದ ಹೊರಟು ಒಂದು ಹೆಜ್ಜೆ ಇಡುವಾಗಲೇ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಎರಡೂ ಕಾಲುಗಳು ತೀವ್ರವಾಗಿ ಗಾಯಗೊಂಡು,ಹಿಂದೆ ನಡೆದ ಘಟನೆಗಳೆಲ್ಲವನ್ನೂ ಮರೆತರು.

1977 ರಲ್ಲಿ ಲಾಲ್ ಬಹದ್ದೂರ್ ಶಾಸ್ರ್ತಿ ಮರಣದ ತನಿಖೆ ನಡೆಸಲೆಂದೇ ನೇಮಿಸಲಾದ ರಾಜ್ ನಾರಾಯಣ್ ಕಮಿಟಿ, ಇಂದಿನ ವರೆಗೂ ತನ್ನ ವರದಿಯನ್ನು ನೀಡಿಲ್ಲ. ನಮ್ಮ ದೇಶದ ಪ್ರಧಾನಿಯ ಮರಣ ಇನ್ನೂ ನಿಗೂಢವಾಗಿಯೇ ಇದೆ.

Comment here