Information

ಬಾರ್ ಕೋಡ್ ನೋಡಿ… ಆ ವಸ್ತುವು ಇಂಡಿಯಾದಾ? ಚೀನಾದಾ? ಇದು ಪಾಕಿಸ್ತಾನದಾ ಎಂದು ತಿಳಿಯಬಹುದು. ಹೇಗೆ ಎಂದು ನಿಮಗೆ ಗೊತ್ತೆ?

ನಾವು ಕೊಳ್ಳುವ ವಸ್ತುಗಳಲ್ಲಿ ಬಾರ್ ಕೋಡ್ ಗಳನ್ನು ಗಮನಿಸಿರಬಹುದು. ಬಾರ್ ಕೋಡನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಅನೇಕ ವಿಷಯಗಳು ತಿಳಿಯುತ್ತವೆ. ಬಾರ್ ಕೋಡಿನ ಮೊದಲ ಮೂರು ಸಂಖ್ಯೆಗಳಿಂದ ಅದು ಯಾವ ದೇಶದ್ದೆಂದು ತಿಳಿಯಬಹುದು.


ಭಾರತದಲ್ಲಿ ತಯಾರಿಸಿದ ಸರಕುಗಳಿಗೆ, ಅವುಗಳ ಮೇಲಿನ ಬಾರ್ ಕೋಡ್ 890 ರಿಂದ ಪ್ರಾರಂಭವಾಗುತ್ತದೆ. ಈ ಸಂಖ್ಯೆಯಿಂದ ಪ್ರಾರಂಭವಾಗುವ ಬಾರ್‌ಕೋಡ್ ಹೊಂದಿರುವ ವಸ್ತುಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಆದ್ದರಿಂದ ನೀವು ಅವುಗಳನ್ನು ಖರೀದಿಸಬಹುದು. ಕೆಳಗಿನ ಚಿತ್ರವನ್ನು ನೋಡಿದರೆ, ಅದು ಭಾರತದ ವಸ್ತು ಎಂದು ತಿಳಿಯಬಹುದು.ಮೊದಲ ಮೂರು ಅಂಕೆಗಳು 890 ಇಂಡಿಯಾ ಕೋಡ್.

ಬಾರ್ ಕೋಡ್ ಸಂಖ್ಯೆ 690 ರಿಂದ 699 ರಿಂದ ಪ್ರಾರಂಭವಾದರೆ, ಈ ವಸ್ತುವನ್ನು ಚೀನಾದಲ್ಲಿ ತಯಾರಿಸಲಾಗುತ್ತದೆ ಎಂದು ನೀವು ತಿಳಿದಿರಬೇಕು.

000 ಯಿಂದ 039 ಅಮೇರಿಕಾ, 060 ಯಿಂದ 139 ಕೆನಡಾ ಎಂದು ತಿಳಿಯಬಹುದು.

628 – ಸೌದಿ ಅರೇಬಿಯಾ

896 – ಪಾಕಿಸ್ತಾನ

 

Comment here