ಯೂರೋಪಿನಲ್ಲಿ ಸೈಮನ್ ಎಂಬುವ ವ್ಯಕ್ತಿಗೆ ಅವನು ಮಾಡಿದ ತಪ್ಪಿಗೆ ಜೈಲಿಗೆ ಹಾಕಲಾಗುತ್ತದೆ. ಅವನಿಗೆ ಯಾವುದೇ ಆಹಾರ ನೀಡದೇ ಉಪವಾಸದಿಂದ ಸಾಯುವ ಶಿಕ್ಷೆ ನೀಡಲಾಗುತ್ತದೆ.
ಸೈಮನ್ ಗೆ ಪೆರು ಎಂಬ ಮಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಜೈಲಿಗೆ ಹಾಕಿ ಎರಡು ದಿನಗಳಾಗಿತ್ತು. ವಿಷಯ ತಿಳಿದ ಕೂಡಲೇ ಪೆರು ಜೈಲರ್ ಹತ್ತಿರ ತನ್ನ ತಂದೆಯನ್ನು ನೋಡಲು ವಿಶೇಷ ಅನುಮತಿ ಪಡೆಯುತ್ತಾಳೆ. ಆದರೆ ಜೈಲರ್ ದಿನಕ್ಕೆ ಒಂದು ಬಾರಿ ಮಾತ್ರ ತಂದೆಯನ್ನು ನೋಡುವಂತೆ , ಆದರೆ ಅವನಿಗೆ ಆಹಾರ ತರಬಾರದು ಎಂಬ ಕಂಡೀಷನ್ ಜೊತೆಗೆ ಪೆರುಗೆ ತನ್ನ ತಂದೆಯನ್ನು ನೋಡಲು ಅನುಮತಿ ಕೊಡುತ್ತಾರೆ.
ಷರತ್ತು ಪ್ರಕಾರ ಪೆರು ಪ್ರತಿ ದಿನ ತನ್ನ ತಂದೆಯನ್ನು ನೋಡಲು ಜೈಲಿಗೆ ಬರುತ್ತಿದ್ದಳು. ತಿಂಗಳು ಕಳೆಯಿತು. ಆದರೆ ಸೈಮನ್ ಸಾಯಲಿಲ್ಲ. ಅಚ್ಚರಿಗೊಂಡ ಸಿಬ್ಬಂದಿ ಪೆರುವನ್ನು ಹಿಂಬಾಲಿಸಿದರು. ಪೆರು ತನ್ನ ತಂದೆಗ ತನ್ನ ಮೊಲೆ ಹಾಲನ್ನು ಕುಡಿಸುತ್ತಿದ್ದಳು. ಈ ವಿಷಯ ಜೈಲರ್ ಗೆ ತಲುಪಿತು. ಇದು ನ್ಯಾಯಾಲಯದ ಮುಂದೆ ಹೋಯಿತು.
ಈ ಬಗ್ಗೆ ಪೆರುಗೆ ನ್ಯಾಯಾಲಯ ಕೇಳಿದಾಗ , ಪೆರು ಹೇಳುತ್ತಾಳೆ , ನನ್ನ ತಂದೆಯನ್ನು ಉಳಿಸಲು ನನಗೆ ಬೇರೆ ಯಾವುದೇ ಮಾರ್ಗ ದೊರಕಲಿಲ್ಲ. ನನ್ನ ತಂದೆಯನ್ನು ಬದುಕಿಸುವುದು ನನ್ನ ಉದ್ದೇಶವಾಗಿತ್ತು. ಅದಕ್ಕೆ ನಾನು ಆತನಿಗೆ ತಾಯಿಯಾದೆ ‘ .
ಇದನ್ನು ಕೇಳಿ ನ್ಯಾಯಾಲಯ ಮಾನವೀಯ ದೃಷ್ಟಿಕೋನದಿಂದ ತಂದೆ ಮತ್ತು ಮಗಳನ್ನು ಕ್ಷಮಿಸಿ ಬಿಡುಗಡೆ ಮಾಡಿತು.
Comment here