Story Pic

ಈ ಫೋಟೊದಲ್ಲಿ ಬಲಗೈ ಎತ್ತಿದ ಮಹಿಳೆಯನ್ನು ನೋಡಿ ! ಆಕೆಯ ಸೀರೆ ಮತ್ತು ಕೈಯ ಹಿಂದಿನ ಅದ್ಬುತ ಸಂದೇಶವೇನು ಗೊತ್ತಾ ?

ಮೂರು ಸುಂದರ ರಾಜವಂಶದ ಮಹಿಳೆಯರಿದ್ದ ರಾಜಮನೆತನದವರ ಹಾಗೆ ಕಾಣುವ ವರ್ಣಚಿತ್ರವನ್ನು ಎಚ್ಚರಿಕೆಯಿಂದ ನೋಡಿ.ಬಲಭಾಗದಲ್ಲಿರುವ ಮಹಿಳೆ ತನ್ನ ಸೀರೆಯನ್ನು ಮೇಲನ್ನೆ ಎತ್ತಿದಂತೆ ಕಾಣಿಸುತ್ತದೆ.ಆದರೆ ಚಿತ್ರಕಾರ ಈ ರೀತಿಯಾಗಿ ಯಾಕೆ ಚಿತ್ರಿಸಿದ ? ಯಾಕೆಂದರೆ‌ ಇದರ ಹಿಂದೆ‌ ಒಂದು ಬಲವಾದ ಸಂದೇಶವಿದೆ.ಅದೇ ಈ ವರ್ಣಚಿತ್ರದ ವಿಶೇಷತೆ.

19 ನೇ ಶತಮಾನದಲ್ಲಿ ಭಾರತದಲ್ಲಿ ಸಿಡುಬು ಸಾಂಕ್ರಾಮಿಕ ರೋಗ ವೇಗವಾಗಿ ಹರಡುತ್ತಿತ್ತು. ಈ ರೋಗ ಮೈಸೂರು ಪ್ರದೇಶದಲ್ಲಿಯೂ ಹರಡಿದ ಸಂದರ್ಭದಲ್ಲಿ ಅಂದಿನ ಮೈಸೂರಿನ ಬ್ರಿಟಿಷ್ ಭಾರತಕ್ಕಾಗಿ ಆಡಳಿತಾತ್ಮಕ ಮುಖ್ಯಸ್ಥರಾಗಿ ಕಾರ್ಯ ನಡೆಸುತ್ತಿರುವ ಮಾರ್ಕ್ ವಿಲ್ಕೆಸ್,ಲಸಿಕೆಗಳ ಬಗ್ಗೆ ಅರಿವು‌ ಇಲ್ಲದಾಗ ಸಿಡುಬು ರೋಗದ ವಿರುದ್ಧ ಲಸಿಕೆ ಪಡೆಯುವಂತೆ ಮೈಸೂರು ಸಾಮ್ರಾಜ್ಯವನ್ನು ಒತ್ತಾಯಿಸಿದರು.

ಆದರೆ ಬ್ರಿಟಿಷ್ ಲಸಿಕೆ ಜೀವಕ್ಕೆ ಅಪಾಯವಾಗಿದೆ ಎಂಬ ವದಂತಿಗಳು ದೇಶಾದ್ಯಂತ ಸುಳ್ಳು ಸುದ್ದಿ ಹುಟ್ಟಿಕೊಂಡಿತು.ಈ ಸಂದರ್ಭದಲ್ಲಿ, ಮೈಸೂರು ರಾಜಕುಮಾರ ಈ ಫೋಟೋದಲ್ಲಿ ಬಲ ದೇವತೆ ಅಂದರೆ ಬಲ ಕಡೆ ಇರುವ ಮಹಿಳೆಯನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂತಹ ಸಂದರ್ಭದಲ್ಲಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜಕುಮಾರಿಯು ಮದುವೆಗೆ ಮೊದಲು ಬ್ರಿಟಿಷ್ ಲಸಿಕೆಯನ್ನು ಪಡೆದರು.ಈ ಮೂಲಕ ರಾಜಕುಮಾರನ ಭಾವಿ ಪತ್ನಿಗೆ ಲಸಿಕೆ ಹಾಕಲಾಯಿತು.ಈ ಬಗ್ಗೆ‌ ಅರಿವು ಮೂಡಿಸಲು ಲಸಿಕೆಯ ಸಾಂಕೇತಿಕವಾಗಿ ತೋರಿಸುವ ಉದ್ದೇಶಕ್ಕಾಗಿ ಸೀರೆಯನ್ನು ಎತ್ತಿ ತೋಳು ತೋರುವ ಹಾಗೆ ವರ್ಣಚಿತ್ರದಲ್ಲಿ ತೋರಿಸಲಾಗಿದೆ.

Comment here