Story Pic

ಬ್ರಿಟಿಷರು ನಮ್ಮ ಶ್ರಮವನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಸಾಕ್ಷಿ… ಈ ಚಿತ್ರ ಹಾಗೂ ವಿವವರಗಳು ನಿಮಗಾಗಿ.

ವ್ಯಾಪಾರ ನಡೆಸುವ ಸೋಗಿನಲ್ಲಿ ನಮ್ಮ ದೇಶಕ್ಕೆ ಬಂದ ಬ್ರಿಟಿಷರು ಎಲ್ಲ ವಿಧಗಳಿಂದಲೂ ನಮ್ಮನ್ನು ದೋಚಿದರು. ನಮ್ಮ ವಾತಾವರಣಕ್ಕೆ ಹೊಂದಿಕೊಂಡರು, ಇಲ್ಲಿರುವ ಸೊಳ್ಳೆಗಳ ಕಾಟಕ್ಕೆ ಹೊಂದಿಕೊಂಡರು, ಮಸಾಲೆ ಪದಾರ್ಥಗಳ ಅಡುಗೆಯನ್ನು ಆಸ್ವಾಧಿಸಿದರು, ನಮ್ಮ ದೇಶದ ಭಾಷೆಯನ್ನು ಅರ್ಥ ಮಾಡಿಕೊಂಡರು. ಆದರೆ…ನಮ್ಮ ದೇಶದ ತಾಪಮಾನಕ್ಕೆ ಹೊಂದಿಕೊಳ್ಳಲಾಗಲು ಸಾಕಷ್ಟು ಕಷ್ಟ ಪಟ್ಟರು. ಆದುದರಿಂದ ನಮ್ಮ ಜನರ ಶ್ರಮವನ್ನು ತಮ್ಮ ಸೌಕರ್ಯಕ್ಕಾಗಿ ಉಪಯೋಗಿಸಿಕೊಂಡರು.

ಚಿತ್ರದಲ್ಲಿ ನೀವು ನೋಡುತ್ತಿರುವವರೆಲ್ಲರೂ ‘ಪಂಕಾವಾಲಾಗಳು’ ಬ್ರಿಟಿಷರು ಅವರಿಗೆ ಬೀಸಣಿಗೆಗಳನ್ನು ಕೊಡುತ್ತಿದ್ದರು.ಬೇಸಿಗೆ ಕಾಲದಲ್ಲಿ ಇವರು ಬ್ರಿಟಿಷರ ಮನೆಗಳಲ್ಲಿ ,ಕಾರ್ಯಾಲಯಗಳಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡಬೇಕಾಗಿತ್ತು.

ದೊಡ್ಡ ತೆರೆಗಳಿಗೆ ಹಗ್ಗವನ್ನು ಕಟ್ಟಿ, ಅವುಗಳನ್ನು ಪಂಕಾವಾಲಾಗಳಿಂದ ಎಳೆಸುತ್ತಿದ್ದರು.ಹೀಗೆ ಹಗ್ಗವನ್ನು ಎಳೆಯುವಾಗ , ಬಟ್ಟೆಯ ತೆರೆ ಅಲುಗಾಡಿ ಅದರಿಂದ ಗಾಳಿ ಬರುತ್ತಿತ್ತು. ಬ್ರಿಟಿಷರು ಈ ಗಾಳಿಯನ್ನು ಆಸ್ವಾಧಿಸುತ್ತಿದ್ದರು. ಹೀಗೆ ಕಷ್ಟಪಟ್ಟು ಬಳಲಿ ಬೆಂಡಾದ ಪಂಕಾವಾಲಾಗಳಿಗೆ ಕಡಿಮೆ ಸಂಬಳವನ್ನು ನೀಡುತ್ತಿದ್ದರು.

ಪಂಕಾವಾಲಾಗಳನ್ನು ಆಯ್ಕೆಮಾಡುವಾಗ ‘ಕಿವುಡ’ರಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಏಕೆಂದರೆ ಕಿವುಡರು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳಲಾರರು ಆದುದರಿಂದ ತಮ್ಮ ರಹಸ್ಯಗಳನ್ನು ಇತರರಿಗೆ ತಿಳಿಸಲಾರರು.

ಕೆಲವು ಬ್ರಿಟಿಷ್ ಅಧಿಕಾರಿಗಳು ವೇಶ್ಯೆಯರ ಸಂಗ ಮಾಡುವ ಸಮಯದಲ್ಲೂ ಸಹ ಪಂಕಾವಾಲಗಳನ್ನು ಕೋಣೆಯಿಂದ ಹೊರಗಿರಿಸಿ, ಅಲ್ಲಿಂದಲೇ ಪಂಕಾಗಳ ಹಗ್ಗವನ್ನು ಎಳೆಸುತ್ತಿದ್ದರಂತೆ!
ಹೀಗೆ ಪಂಕಾವಾಲಾಗಳು ರಾತ್ರಿಯಿಡೀ ಹಗ್ಗ ಎಳೆದು ಸೋತು ಸುಣ್ಣವಾಗಿ ಪ್ರಜ್ಞೆತಪ್ಪಿ ಬೀಳುತ್ತಿದ್ದರಂತೆ

Comment here