Life StoryStory Pic

ನನ್ನ ಮದುವೆಯ ದಿನ ಈ ಪೆನ್ನಿಂದ ಸಹಿ ಮಾಡುತ್ತಿದ್ದರೆ…ನೆನಪಿಗೆ ಬಂದ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನನ್ನ 10 ನೇ ಹುಟ್ಟು ಹಬ್ಬದಂದು ನನಗೆ ಅನೇಕ ಉಡುಗೊರೆಗಳು ಬಂದವು. ಅವುಗಳಲ್ಲಿ ಒಂದು ಬೆಲೆ ಬಾಳುವ ಪೆನ್ ಸಹ ಇದೆ? ಅಂದಿನ ದಿನಗಳಲ್ಲಿ ಅದರ ಬೆಲೆ 2000 ರೂಪಾಯಿಗಳಂತೆ ! ಅದು ಬೆಲೆ ಬಾಳುವ ಪೆನ್ನೆಂದು ಅದರ ಬಾಕ್ಸ್ ನೋಡಿದರೇನೆ ತಿಳಿಯುತ್ತದೆ. ನನ್ನ ಬಾಲ್ಯದಿಂದಲೂ ನನಗಿಷ್ಟವಾದ ವಸ್ತುಗಳನ್ನು ಒಂದು ಬಾಕ್ಸ್ ನಲ್ಲಿ ಹಾಕಿಡುತ್ತಿದ್ದೆ. ಅದೇರೀತಿ ಆ ಬೆಲೆ ಬಾಳುವ ಪೆನ್ನನ್ನೂ ಸಹ ಬಾಕ್ಸ್ ನಲ್ಲಿ ಹಾಕಿದ್ದೆ.

ಪ್ರತೀ ದಿನ ಶಾಲೆಯಿಂದ ಬಂದ ನಂತರ, ಆ ಬಾಕ್ಸ್ ತೆರೆಯುವುದು, ಆ ಪೆನ್ನನ್ನು ನೋಡಿ ಮತ್ತೆ ಬಾಕ್ಸ್ ನಲ್ಲೇ ಹಾಕಿಡುತ್ತಿದ್ದೆ. ಹೀಗೆ ಒಂದುವಾರ ಕಳೆಯಿತು. ನಂತರ ದಿನಗಳಲ್ಲಿ ವಾರಕ್ಕೊಮ್ಮೆ, ಆ ನಂತರ ತಿಂಗಳಿಗೊಮ್ಮೆ ಆ ಪೆನ್ನನ್ನು ನೋಡುತ್ತಿದ್ದೆ. ನಂತರದ ದಿನಗಳಲ್ಲಿ ಇಷ್ಟವಾದಾಗ ಮಾತ್ರ ಬಾಕ್ಸ್ ತೆರೆದು ಪೆನ್ನನ್ನು ನೋಡುತ್ತಿದ್ದೆ.

ನಾನು ಪಿಯು ಓದುತ್ತಿದ್ದೆ. ಪ್ರಾಜೆಕ್ಟ್ ವರ್ಕ್ ಪ್ರಾರಂಭವಾಯಿತು… ಆ ಪ್ರಾಜೆಕ್ಟನ್ನು ನನಗಿಷ್ಟವಾದ ಪೆನ್ನಿನಿಂದ ಬರೆಯ ಬೇಕೆಂದುಕೊಂಡೆ.

ಪೆಟ್ಟಿಗೆ ತೆರೆದೆ…ಪೆನ್ ಬಾಕ್ಸ್ ನಿಂದ ಪೆನ್ನನ್ನು ತೆಗೆದು ಬರೆಯತೊಡಗಿದೆ. ಊಹ್ಞೂಂ… ಬರೆಯುತ್ತಿಲ್ಲ. ಎಲ್ಲರೂ ಮಾಡುವಂತೆ ಒಂದೆರಡು ಸಲ ಪೆನ್ನನ್ನು ಕೊಡವಿದೆ, ಬರೆಯುತ್ತಿಲ್ಲ. ಹೀಗೆ ಹಲವು ಬಾರಿ ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. ಕೊನೆಗೆ ಅಸಹನೆಯಿಂದ ಪೆನ್ನನ್ನು ಬದಿಗಿಟ್ಟೆ.

ನಮ್ಮ ಬಳಿ ಎಷ್ಟೇ ಬೆಲೆಬಾಳುವ ವಸ್ತುವಿದ್ದರೂ ಅದನ್ನು ಆಗಾಗ್ಗೆ ಉಪಯೋಗಿಸುತ್ತಿರಬೇಕು. ಇದು ಸತ್ಯವೂ ಸಹ. ಇಲ್ಲವಾದಲ್ಲಿ ಅದು ಹಾಳಾಗುತ್ತದೆ. ನಮ್ಮಲ್ಲಿರುವ ಸಾಮರ್ಥ್ಯವೂ ಸಹ ಅಷ್ಟೇ. ಆಗಾಗ್ಗೆ ಉಪಯೋಗಿಸುತ್ತಿರಬೇಕು .ಇಲ್ಲವಾದಲ್ಲಿ ನನ್ನ ಪೆನ್ನಿನಂತೆ ಹಾಳಾಗುತ್ತದೆ!

ಇದು ನನ್ನ ಮದುವೆ ಸಮಯದಲ್ಲಿ ತೆಗೆದ ಫೊಟೊ…ಅಂದು ಸಹಿ ಮಾಡಲು ನಾನು ಉಪಯೋಗಿಸಿದ ಪೆನ್ನಿನ ಬೆಲೆ ಕೇವಲ 10 ರೂಪಾಯಿ!

Comment here