ಮದ್ರಾಸ್ ಯೂನಿವರ್ಸಿಟಿಯಲ್ಲಿ…1905 ರಲ್ಲಿ ಒಬ್ಬ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವಾಗ ತೆಗೆದ ಫೋಟೊ ಇದು. ಓದಿನ ಬಗ್ಗೆ ಆತನಿಗಿರುವ ಆಸಕ್ತಿಯನ್ನು ಈ ಚಿತ್ರ ತಿಳಿಸುತ್ತದೆ. ಅಂದಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಓದಬೇಕೆಂದುಕೊಳ್ಳುವ ಮದ್ರಾಸ್ ಯೂನಿವರ್ಸಿಟಿ ವಿದ್ಯಾರ್ಥಿಗಳೆಲ್ಲರೂ ಹೀಗೇ ಮಾಡುತ್ತಿದ್ದರಂತೆ! ದೀಪದ ಬೆಳಕಿನಲ್ಲಿ ತಮ್ಮ ಪುಸ್ತಕಗಳೊಂದಿಗೆ ರಾತ್ರಿಯೆಲ್ಲಾ ಹೀಗೆ ಕಳೆಯುತ್ತಿದ್ದರಂತೆ ! ತಮ್ಮ ಜುಟ್ಟನ್ನು ಗೋಡೆಯಲ್ಲಿರುವ ಮೊಳೆಗೆ ಕಟ್ಟಿ ಓದುವ ಕಾರಣವೇನೆಂದರೆ…ಒಂದುವೇಳೆ ಓದುತ್ತಿರುವ ಸಮಯದಲ್ಲಿ ನಿದ್ರೆಗೆ ಜಾರಿ,ತೂಕಡಿಸಿದರೆ, ಮೊಳೆಗೆ ಕಟ್ಟಿರುವ ಜುಟ್ಟು ತಡೆಯುತ್ತದೆ.
ಪರಿಕ್ಷೆಗಳು ನಡೆಯುತ್ತಿರುವ ಸಮಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳು, ನಿದ್ರೆಬಾರದಿರಲೆಂದು ಹಲವು ವಿಧವಾದ ತಂತ್ರಗಳ ಮೊರೆ ಹೋಗುತ್ತಾರೆ.
- ಟೀ-ಕಾಫೀ ಸೇವಿಸುವುದು,
- ಕೈಗೆ ರಬ್ಬರ್ ಬ್ಯಾಂಡ್ ಕಟ್ಟಿಕೊಂಡು,
- ನಿದ್ದೆ ಬಂದಾಗ ಜೋರಾಗಿ ಎಳೆದು ಬಿಡುವುದು.
- ಆಗಾಗ್ಗೆ ನಡೆಯುವುದು.
- ಒದ್ದೆ ಬಟ್ಟೆಯಿಂದ ಮುಖವನ್ನು ಒರೆಸಿಕೊಳ್ಳುವುದು…
ಎಲ್ಲಾ ಸೌಕರ್ಯಗಳಿದ್ದರೂ ಸಹ ಓದಲು ಸೋಮಾರಿತನ ತೋರುವ ಇಂದಿನ ಪೀಳಿಗೆಯ ಮಕ್ಕಳು ಈ ಫೋಟೊ ನೋಡಿ ಎಂತಹ ಪರಿಸ್ಥಿಗಳಲ್ಲಿ ನಮ್ಮ ಪೂರ್ವಜರು ವಿದ್ಯಾಭ್ಯಾಸ ಮಾಡಿದರು ಎಂಬುವುದನ್ನು ಅರ್ಥಮಾಡಿಕೊಳ್ಳ ಬಹುದು.!
Comment here