Exclusive

ವರದಕ್ಷಿಣೆ ಪಡೆಯಲೆಂದೇ ಮದುವೆ ಮಾಡಿಕೊಳ್ಳಬೇಕೆನ್ನುವುದು ನನ್ನ ಸಮಸ್ಯೆಗೆ ಪರಿಷ್ಕಾರವೇ? ದಯವಿಟ್ಟು ನೀವೊಂದು ಒಳ್ಳೆಯ ಸಲಹೆ ನೀಡಿ!

ನನ್ನ ಹೆಸರು ಭಾನು. ಪದವೀಧರ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಆದಾಯ ಕೇವಲ 20 ಸಾವಿರ ರೂಪಾಯಿಗಳು ಮಾತ್ರ. ನನ್ನ ಕುಟುಂಬ ಸದಸ್ಯರನ್ನು ಸಾಜುವ ಹೊಣೆ ನನ್ನ ಮೇಲಿದೆ. ಆದುದರಿಂದ ಅವರಿಗೆ ನಾನು ಪ್ರತೀ ತಿಂಗಳು 10-12 ಸಾವಿರ ರೂಪಾಯಿಗಳನ್ನು ಕಳುಹಿಸುತ್ತಿದ್ದೇನೆ. ನನಗೆ ಬರುತ್ತಿರುವ ಸಂಬಳ ಸಾಲದು ಆದುದರಿಂದ ನನ್ನ ಪರಿಚರಸ್ಥರ ಬಳಿ 8 ಲಕ್ಷ ರೂಪಾಯಿಗಳ ಸಾಲಮಾಡಿ, ಬ್ಯಾಂಕ್ ನಿಂದ ಲೋನ್ ತೆಗೆದುಕೊಂಡು ಒಬ್ಬ ಪಾಲುಗಾರನೊಂದಿಗೆ ಸೇರಿ ‘ಮೊಬೈಲ್ ಫುಡ್ ಬಿಸಿನೆಸ್’ ಪ್ರಾರಂಭಿಸಿದೆ. ವ್ಯಾಪಾರವೇನೋ ಚೆನ್ನಾಗಿ ನಡೆಯುತ್ತಿತ್ತು ಆದರೇನು ಮಾಡುವುದು ಅಷ್ಟರಲ್ಲೇ ಈ ಕೊರೊನಾ ಮಹಾಮಾರಿವಕ್ಕರಿಸಿತು. ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಜರುಗಲಿಲ್ಲ.

ವ್ಯಾಪಾರ ಇಲ್ಲದಂತಾಯಿತು. ತೆಗೆದುಕೊಂಡ ಸಾಲಕ್ಕೆ ತಪ್ಪದೆ ಬಡ್ಡಿ ಕಟ್ಟಲೇ ಬೇಕು. ಸಾಲ ತೀರಿಸಲು ನನ್ನ ಬಳಿ ಯಾವುದೇ ಆಸ್ತಿಯಿಲ್ಲ. ದುರಾದೃಷ್ಟವೆಂಬಂತೆ ಉದ್ಯೋಗವೂ ಕೈಜಾರಿತು. ಈ ನಿಟ್ಟಿನಲ್ಲಿ ವ್ಯಾಪಾರವನ್ನು ನಿಲ್ಲಿಸದೇ ಅನ್ಯಮಾರ್ಗವಿಲ್ಲ. ಮಾಸಿಕ ಕಂತುಗಳನ್ನು ಕಟ್ಟಬೇಕು, ಮನೆಯ ಕರ್ಚುಗಳನ್ನು ನೋಡಿಕೊಳ್ಳಬೇಕು. ಈ ಎಲ್ಲ ವಿಷಯಗಳಿಂದ ನನಗೆ ಹುಚ್ಚು ಹಿಡಿಯುವಂತಿದೆ.

ನನ್ನ ಕಷ್ಟವನ್ನು ಆತ್ಮೀಯ ಗೆಳೆಯನೊಬ್ಬನಲ್ಲಿ ಹೇಳಿಕೊಂಡೆ.ಆತ ಮದುವೆ ಮಾಡಿಕೊಳ್ಳಲು ಹೇಳಿದ. ವರದಕ್ಷಿಣೆ ರೂಪದಲ್ಲಿ ಬರುವ ಹಣದಿಂದ ಸಾಲವನ್ನು ತೀರಿಸಿ ಮಿಕ್ಕುಳಿದ ಹಣವನ್ನು ಬ್ಯಾಕಿನಲ್ಲಿರಿಸಿ, ಯಾವುದಾದರೊಂದು ಚಿಕ್ಕ ಉದ್ಯೋಗವನ್ನು ಮಾಡಲು ಸಲಹೆ ನೀಡಿದ. ಸರಕಾರಿ ಉದ್ಯೋಗ ದೊರೆಯುವ ಅವಕಾಶ ಬಂದಾಗ… ಮಾಡುತ್ತಿರುವ ಚಿಕ್ಕ ಉದ್ಯೋಗವನ್ನು ಬಿಟ್ಟು, ಯಾವುದಾದರು ಒಂದು ಒಳ್ಳೆಯ ಕೋಚಿಂಗ್ ಸೆಂಟರ್ ಗೆ ಸೇರಿ ಕೆಲಸಕ್ಕಾಗಿ ಪ್ರಯತ್ನ ಮಾಡಬೇಕೆಂಬ ಸಲಹೆ ನೀಡಿದ.
ವರದಕ್ಷಿಣೆಗಾಗಿಯೇ ಮದುವೆ ಮಾಡಿಕೊಳ್ಳುವುದು ಸರಿಯೇ? ಮತ್ತೇನಾದರೂ ಪರ್ಯಾಯ ಮಾರ್ಗವಿದೆಯೇ? ನಿಮ್ಮ ಸಲಹೆಯೇನು?

Comment here