Exclusive

ನೀವಂದುಕೊಂಡಂತೆ ರೊಮ್ಯಾಂಟಿಕ್ ಫೋಟೊ ಇದಲ್ಲ. ಇದರಲ್ಲಿ ಊಹಿಸಲಾರದಷ್ಟು ಶೋಕ ಅಡಗಿದೆ. ಅದೇನೆಂದು ಗೊತ್ತಾ?

ಫೋಟೊ ನೋಡಿದರೆ…ಸಂಜೆಯ ವೇಳೆ ಯುವ ಜೋಡಿಯೊಂದು ಬೀಚ್ ನಲ್ಲಿ ಚಕ್ಕಂದವಾಡುತ್ತಿರುವಂತೆ ನಿಮಗೆ ಕಾಣಿಸುತ್ತದಲ್ಲವೇ? ಆದರೆ, ಈ ಫೋಟೊ ಹಿಂದೆ ನೀವು ಊಹಿಸಲಾರದಷ್ಟು ಶೋಕವಿದೆ. ಸ್ವಂತ ಮಗನನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ತಾಯಿಹೃದಯವಿದೆ.

ಈ ಫೋಟೊದಲ್ಲಿರುವುದು ಪತಿ ಪತ್ನಿಯರೇ.ಸಂಜೆಯ ಸಮಯದಲ್ಲಿ ತಮ್ಮ 19 ವರ್ಷ ವಯಸ್ಸಿನ ಮಗನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಬರುತ್ತಾರೆ. ಮಗ ಸಮುದ್ರದ ಅಲೆಗಳೊಂದಿಗೆ ಮೈಮರೆತು ಆಟವಾಡುತ್ತಿರುತ್ತಾನೆ. ಇದನ್ನು ನೋಡಿದ ತಂದೆ ತಾಯಿಯೂ ಸಹ ಸಂತಸದಿಂದಿರುತ್ತಾರೆ. ನೋಡ ನೋಡುತ್ತಿದ್ದಂತೆ ಆಕಾಶದೆತ್ತರದ ಅಲೆಯೊಂದು ಬಂದು ಮಗುವನ್ನು ಸಮುದ್ರದೊಳಗೆ ಎಳೆದುಕೊಂಡು ಹೋಗುತ್ತದೆ. ತದನಂತರ ಒಂದರ ಮೇಲೊಂದರಂತೆ ಅಲೆಗಳು ಬರತೊಡಗುತ್ತವೆ. ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿ ಆ ದಂಪತಿಗಳಿರುತ್ತಾರೆ.

ಅದೇ ಸಮಯದಲ್ಲಿ, ಆ ಮಗುವಿನ ತಾಯಿ ತನ್ನ ಗಂಡವನ್ನು ತಬ್ಬಿಕೊಂಡು ಅಳುತ್ತಿರುವಾಗ ತೆಗೆದ ಫೋಟೊ ಇದು. ಘಟನೆ ನಡೆದ ಪ್ರದೇಶದಿಂದ ಕಿಲೋಮೀಟರ್ ದೂರದಲ್ಲಿ ಮರುದಿನ ಆ ಮಗುವಿನ ಶವ ಕಾಣಿಸಿತು.

‘ಹರ್ಮೋಸ ಬೀಚ್’ ನಲ್ಲಿ ಏಪ್ರಿಲ್ 2 ,1954 ರಲ್ಲಿ ‘ಲಾಸ್ ಎಂಜಲೀಸ್’ ಫೋಟೊಗ್ರಾಫರ್ ಜಾನ್ ಗಾಂಟ್ ಈ ಫೋಟೊವನ್ನು ತೆಗೆದರು. ಈ ಚಿತ್ರಕ್ಕಾಗಿ ಅವರಿಗೆ ಪ್ರಖ್ಯಾತ ‘ಪುಲಿಟ್ಜರ್’ ಅವಾರ್ಡ್ ದೊರೆಯಿತು’ ಟ್ರಾಜೆಡಿ ಬೈ ದಿ ಸೀ’ ಎಂಬ ಶೀರ್ಷಿಕೆಯನ್ನು ಹೊತ್ತ ಈ ಫೋಟೊ ಬಹಳಷ್ಟು ವೀಕ್ಷಕರ ಕಣ್ಣುಗಳನ್ನು ಒದ್ದೆಯಾಗಿಸಿತು

Comment here