Information

ಈ ಫೋಟೋ ಹೇಳುವ ಕತೆ ಓದಿ.!!

ಪ್ರಿಯ ಸ್ನೇಹಿತರೇ ಈ ಫೋಟೋದಲ್ಲಿ ಕಾಣುವ ವ್ಯಕ್ತಿಯ ಹೆಸರು ಮಿಯಾಖಾನ್. ಈತ ಪ್ರತಿ ದಿನ ತನ್ನ ಮೂವರು ಹೆಣ್ಣು ಮಕ್ಕಳನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಹನ್ನೆರಡು ಕಿಲೋ ಮೀಟರ್ ದೂರವಿರುವ ಶಾಲೆಗೆ ಕರೆದುಕೊಂಡು ಹೋಗುತ್ತಾನೆ. ಶಾಲೆಯ ಬೆಲ್ ಹೊಡೆಯುವವರೆಗೂ ಕಾದು ಪುನಃ ತನ್ನ ಮಕ್ಕಳನ್ನು ಕೂರಿಸಿಕೊಂಡು ವಾಪಾಸ್ ಮನೆಗೆ ಕರೆದುಕೊಂಡು ಬರುತ್ತಾನೆ.

ಇದು ನಮಗೆ ಸಾಧಾರಣ ವಿಷಯವಾಗಿದೆ. ಆದರೆ ಸ್ತ್ರೀ ಶಿಕ್ಷಣಕ್ಕೆ ನಿಷೇಧ ಇರುವ ಆಫ್ಘಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಇದು ಅತ್ಯಂತ ಧೈರ್ಯಶಾಲಿ ಕೆಲಸ.ಮಹಿಳೆ ಕೇವಲ ಅಡುಗೆ ಮನೆಗೇ ಮೀಸಲು ಎಂದು ಪತ್ಯಾ ಹೊರಡಿಸಿರುವಂತಹ ಪ್ರಾಂತ್ಯಗಳಲ್ಲಿ ಇದು ಸಾಹಸಮಯ ವಿಷಯ.
ಈ ವಿಷಯದ ಬಗ್ಗೆ ಮಿಯಾಖಾನ್ ಗೆ ಪ್ರಶ್ನಿಸಿದಾಗ ಆತ , ” ನಮ್ಮ ಊರಿನಲ್ಲಿ ಡಾಕ್ಟರ್ ಗಳು ಇಲ್ಲ. ಅದಕ್ಕೆ ನನ್ನ ಮಕ್ಕಳನ್ನು ಡಾಕ್ಟರ್ ಆಗುವಂತೆ ಓದಿಸುತ್ತೇನೆ. ನಾನಂತೂ ಓದಿಲ್ಲ.ನಮ್ಮ ಮಕ್ಕಳ ಓದು ಇಲ್ಲಿ ಅತ್ಯಂತ ಅವಶ್ಯಕವಾಗಿದೆ ” ಎನ್ನುತ್ತಾನೆ.

Comment here