HistoryInformation

ಪ್ರಪಂಚದ ಅತಿ ಕಿರಿಯ ವಯಸ್ಸಿನ ತಾಯಿ. ಕೇವಲ 5 ವರ್ಷಕ್ಕೇ ತಾಯಿ ಆದಳು..

ಸಾಮಾನ್ಯವಾಗಿ ಒಂದು ಹೆಣ್ಣು ತಾಯಿ ಆಗಲು ಅವಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.

ಕೆಲವು ಹೆಣ್ಣು ಮಕ್ಕಳು ಕನಿಷ್ಠ 20 ತುಂಬಿದರೂ ತಾಯಿ ಆಗುವ ಸಾಮರ್ಥ್ಯ ಮತ್ತು ಶಕ್ತಿ ಹೊಂದಿರುವುದಿಲ್ಲ.

ಆದರೆ ನಾವು ಕೆಲವು ಮಾಧ್ಯಮಗಳಲ್ಲಿ ನೋಡುವಂತೆ 15 ವರ್ಷಕ್ಕೆ ತಾಯಿ ಆದ ಹುಡುಗಿಯರು ಇದ್ದಾರೆ .

ಆದರೆ ಇದನ್ನು ಓದಿದರೆ ನಿಮಗೆ ಇನ್ನೂ ಆಶ್ಚರ್ಯವಾಗುತ್ತದೆ. ಲೀನಾ ಮೆದಿನ ಬಗ್ಗೆ ತಿಳಿದರೆ ನೀವು ಶಾಕ್ ಆಗ್ತೀರ ! ಆಕೆಗೆ ಈಗ 85 ವರ್ಷ.

ಆಕೆಗೆ 80 ವರ್ಷ ವಯಸ್ಸಿನ ಗಂಡು ಮಗನಿದ್ದಾನೆ. ಅವನಿನ್ನೂ ಬದುಕಿದ್ದಾನೆ.

1933 ರಲ್ಲಿ ಲೀನಾ ಮೆದಿನಾ ಐದು ವರ್ಷವಿದ್ದಾಗ ಮಗುವಿಗೆ ಜನ್ಮ ಇತ್ತಳು. ಅವಳಿಗೆ ನಾರ್ಮಲ್ ಡೆಲಿವರಿ ಆಗಲಿಲ್ಲ. ಆಗಿನ ಕಾಲದ ತಂತ್ರಜ್ಞಾನದ ಪ್ರಕಾರ ಸಿಜೇರಿಯನ್ ಆಯಿತು.

ಐದು ವರ್ಷಕ್ಕೆ ಲೀನಾ ತಾಯಿಯಾದಳು. ಲೀನಾಗೆ ಹೊಟ್ಟೆ ನೋವು ಬಂದಿದೆ. ಹೊಟ್ಟೆಯ ಒಳಗೆ ಏನೋ ಬೆಳೆಯುತ್ತಿದೆ ಎಂದು ಭಯ ಆಗಿದೆ. ಕಡೆಗೆ ಡಾಕ್ಟರ್ ಗೆ ತೋರಿಸಿದಾಗ ಡಾಕ್ಟರ್ ಚೆಕ್ ಮಾಡಿ ಆಕೆ ಗರ್ಭಿಣಿ ಎಂದು ಹೇಳಿದ್ದಾರೆ.ಇದನ್ನು ಕೇಳಿ ಆಕೆಯ ತಂದೆ ತಾಯಿ ನಂಬಲಿಲ್ಲ. ಡಾಕ್ಟರ್ ಸುಳ್ಳು ಹೇಳುತ್ತಿದ್ದಾರೆ ಎಂದು ಅನ್ನಿಸಿ ಮೂರ್ನಾಲ್ಕು ಡಾಕ್ಟರ್ ಗಳ ಬಳಿ ಪರೀಕ್ಷಿಸಿರು. ಅವರೂ ಕೂಡ ಆಕೆ ಗರ್ಭಿಣಿ ಎಂದರು. ಈಗಾಗಲೇ ಆಕೆಗೆ ಏಳು ತಿಂಗಳಾಗಿತ್ತು. ಅಬಾರ್ಷನ್ ಮಾಡುವ ಹಾಗೂ ಇರಲಿಲ್ಲ.

ಆಕೆ ಐದು ವರ್ಷಕ್ಕೆ ತಾಯಿ ಹೇಗೆ ಆದಳು . ತಾಯಿ ಆಗಲು ಕಾರಣ ಮಾತ್ರ ಇಂದಿಗೂ ನಿಗೂಢವಾಗಿದೆ. ಲೀನಾಗೆ ಮೂರು ವರ್ಷವಿದ್ದಾಗಲೇ ಋತುಕ್ರಮವಾಗಿತ್ತಂತೆ.

ಐದು ವರ್ಷವಿದ್ದಾಗ ಆಕೆಯ ಮೇಲೆ ಯಾರೋ ಅತ್ಯಾಚಾರ ಮಾಡಿದರು .ಅದಕ್ಕೆ ಅವಳು ಗರ್ಭಿಣಿ ಆದಳು .

ಆರಂಭದಲ್ಲಿ, ಲೆನಾಳ ತಂದೆಯ ಮೇಲೆ ಕೆಲವು ಅನುಮಾನಗಳು ಕೇಳಿಬಂದವು.ಆದರೆ, ಆತ ಅಲ್ಲ ಎಂದು ಪೊಲೀಸರು ಕಂಡುಕೊಂಡರು.

ಲೀನಾಗೆ 10 ವರ್ಷವಾದಾಗ ಅವಳ ಮಗನಿಗೆ 5 ವರ್ಷ. ಇಬ್ಬರೂ ಒಟ್ಟಿಗೆ ಶಾಲೆಗೆ ಹೋದರು‌. ಪ್ರಪಂಚದಲ್ಲಿ ಅತ್ಯಂತ ಕಿರಿಯ ತಾಯಿಯ ಪಟ್ಟ ಎಂಬ ದಾಖಲೆ ಆಕೆಗಿದೆ.
ಲೀನಾಳ ಈ ರೆಕಾರ್ಡ್ ಅವಳ ಬಳಿಯೇ ಇರಲಿ ಎಂದು ಎಲ್ಲರೂ ಆಶಿಸುತ್ತಾರೆ. ಯಾಕೆಂದರೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿ ಆಗುವುದು ಬೇಡ ಎಂದು .

ಲೀನಾಗೆ 45 ವರ್ಷವಾದಾಗ ಅಕೆ ಮರಣ ಹೊಂದಿದಳು. ಆಗ ಅವನ ಮಗನಿಗೆ 40 ವರ್ಷ ವಯಸ್ಸಾಗಿತ್ತು.ಆಕೆ ಮದುವೆ ಕೂಡ ಆಗಿ ಒಂದು ಮಗುವಿಗೆ ಜನ್ಮ ನೀಡಿದ್ದಳು.

Comment here