Viral

ಈ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದು ನೋಡಿದರೆ ಶಾಕ್ ಆಗ್ತೀರ !

ಇವತ್ತು ನನಗೆ ಒಂದು ಮದುವೆ ಆಮಂತ್ರಣ ಪತ್ರಿಕೆ ಬಂದಿತು. ಅದರಲ್ಲಿ w/L 1 , W/L 2 ಎಂದು ಬರೆದಿತ್ತು. ಕುತೂಹಲ ತಡೆಯಲಾರದೇ ವಧುವಿಗೆ ಫೋನ್ ಮಾಡಿ ಕೇಳಿದೆ. ಅವಳು ಹೇಳಿದಳು. ” ನಿಮ್ಮದು Waiting list 1, waiting list 2. ಈಗಾಗಲೇ 50 ಜನರಿಗೆ ಇನ್ವಿಟೇಷನ್ ಕೊಟ್ಟಿದ್ದೇವೆ. ಅವರಲ್ಲಿ ಯಾರಾದರೂ ಬರದಿದ್ದರೆ ನೀವು ಮತ್ತು ನಿಮ್ಮ ಹೆಂಡತಿ ಬರಬಹುದು . ಅದಕ್ಕೆ ನಿನ್ಮನ್ನು waiting list ಲ್ಲಿ ಇಟ್ಟಿದ್ದೇವೆ. ಥ್ಯಾಂಕ್ಯು ಎಂದು ಪೋನ್ ಕಟ್ ಮಾಡಿದಳು.

ಇದು ಹೀಗಿರುವಾಗ ಲಾಕ್ಡೌನ್ ನಿಂದ ಅನೇಕ ಮದುವೆಗಳು ನಿಂತು ಹೋಗಿವೆ. ಕೆಲವರು ಗುಡಿಯ ಮುಂದೆ ಮದುವೆಯನ್ನು ಸರಳವಾಗಿ ಆಗುತ್ತಿದ್ದಾರೆ. ನಿಶ್ಚಿತಾರ್ಥ ಆದರೂ ಮದುವೆಯನ್ನು ಮುಂದೂಡಿದವರಿದ್ದಾರೆ. ಕರೋನದಿಂದ ಮದುವೆಗೆ ಮುಹೂರ್ತ ಇಲ್ಲ ಎನ್ನುವವರಿದ್ದಾರೆ.ಆದರೆ ಮದುವೆಗೆ ಅಲ್ಲಿಯವರೆಗೆ ಯಾರೂ ಕಾಯುವುದಿಲ್ಲ.

ಇಲ್ಲಿಯವರೆಗೂ ಕರೋನಾಗೆ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಇದಕ್ಕೆ ಕನಿಷ್ಠ ಒಂದು ವರ್ಷವಾದರೂ ಹಿಡಿಯುತ್ತದೆ ಅಂತೆ. ಸರ್ಕಾರ ಕೂಡ ನಾವು ಕರೋನಾದೊಂದಿಗೆ ಬದುಕು ನಡೆಸಬೇಕು ಎಂದು ಹೇಳಿದೆ. ಬದುಕು ಈಗ ದುಸ್ತರವಾಗಿದೆ.

ಸರ್ಕಾರವು ಎಲ್ಲ ಜನರಿಗೆ ಸಾಮಾಜಿಕ ಅಂತರವನ್ನು ಅನುಸರಿಸಲು ಎಚ್ಚರಿಕೆ ನೀಡುತ್ತಿದೆ ಮತ್ತು ಅಗತ್ಯವಿಲ್ಲದಿದ್ದರೆ ಹೊರಗೆ ಬರಬಾರದು. ನಾವು ಹೊರಬರಲು ಬಯಸಿದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕಣ್ಣು ಮೂಗನ್ನು ಆದಷ್ಟು ಮುಟ್ಟಬಾರದು. ಇತರರಿಗೆ ಶೇಕ್ ಹ್ಯಾಂಡ್ಸ್ ನೀಡಬೇಡಿ. ನೀವು ಹೊರಗೆ ಏನನ್ನಾದರೂ ಮುಟ್ಟಿದರೆ, ನೀವು ತಕ್ಷಣ ಸ್ಯಾನಿಟೈಜರ್‌ನಿಂದ ಕೈ ತೊಳೆಯಬೇಕು. ಈ ಎಲ್ಲಾ ಮುನ್ನೆಚ್ಚರಿಕೆಗಳು ಕರೋನಾವನ್ನು ಸ್ವಲ್ಪ ಮಟ್ಟಿಗೆ ಹರಡುವುದನ್ನು ತಡೆಯಬಹುದು.

ಈ ಸಮಯದಲ್ಲಿ ಮದುವೆ ನಡೆಯುವುದು ಕಷ್ಟವೇ. ಆದರೂ ಮೊದಲಿನ ಹಾಗೇ ಗ್ರಾಂಡಾಗಿ ಆಗುವಂತಿಲ್ಲ. ಕರೋನದಿಂದ ಸಿನಿಮಾ ಜಗತ್ತಿಗೂ ಏಟಾಗಿದೆ. ಥಿಯೇಟರ್ ಮುಚ್ಚಿವೆ. ಸಿನಿಮಾ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ಆದರೆ ಕೆಲವು ನಿರ್ದಿಷ್ಟ ಷರತ್ತುಗಳನ್ನು ಪಾಲಿಸಬೇಕು.

 

Comment here