HistoryInformation

ಕ್ವಾರಂಟೈನ್ ಹೆಸರಿನಲ್ಲಿ ನಮ್ಮ ದೇಶದ ಪುರುಷರನ್ನು ಹೊಡೆದುರುಳಿಸಿದ ಬ್ರಿಟಷರು – ಚರಿತ್ರೆ ಹೇಳದ ಸತ್ಯ ನಿಮಗೆ ಗೊತ್ತೇ?

ಕ್ವಾರಂಟೈನ್ ಈ ಹೆಸರು ಈಗ ನಮಗೆ ಸಾಮಾನ್ಯವಾಗಿದೆ.ಆದರೆ ಇದೇ ಹೆಸರಿನಲ್ಲಿ 1915 ರಲ್ಲಿ ನಮ್ಮ ದೇಶದ ಖೈದಿಗಳನ್ನು ದಯಾ ದಾಕ್ಷಿಣ್ಯವಿಲ್ಲದೆ ಗುಂಡಿಕ್ಕಿ ಸಮುದ್ರಕ್ಕೆ ಎಸೆಯಲಾಯಿತು. ಈ ಆಘಾತಕಾರಿ ಘಟನೆ 1915 ರಲ್ಲಿ ಜರುಗಿತು.

ಆಗ ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವವರಿಗೆ ಪರ್ಯಾಯ ದ್ವೀಪಕ್ಕೆ ಜೈಲಿಗೆ ಕಳಿಸುತ್ತಿದ್ದರು. ಆಗ ಹೆಚ್ಚು ಜನರನ್ನು ಅಂಡಮಾನ್ ನಲ್ಲಿರುವ ಜೈಲಿಗೆ ಕಳಿಸುತ್ತಿದ್ದರು. ಆಗ ಒಂದು ದಿನ ಭಾರತೀಯ ಖೈದಿಗಳನ್ನು ಹಿಂದೂ ಮಹಾಸಾಗರದ ಮೂಲಕ ಅಂಡಮಾನ್ ಗೆ ನೌಕೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಒಬ್ಬ ಖೈದಿಗೆ ಸಿಡುಬು ರೋಗ ಬಂದಿತು. ಇದನ್ನು ತಿಳಿದ ಕ್ಯಾಪ್ಟನ್ ಮೂರೂ ಜನ ಖೈದಿಗಳನ್ನು ಗುಂಡಿಕ್ಕಿ ಸಮುದ್ರಕ್ಕೆ ಎಸೆದನು. ಆ ಕಾಲದಲ್ಲಿ ಸಿಡುಬು ರೋಗಕ್ಕೆ ಜನರು ಹೆದರುತ್ತಿದ್ದರು. ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬ ಭಯ ಇತ್ತು. ತಮಗೂ ಆ ರೋಗ ಹರಡಬಹುದು ಎಂಬ ಭಯದಿಂದ ಕ್ಯಾಪ್ಟನ್ ಆ ರೀತಿ ಮಾಡಬೇಕಾಯಿತು.

ಖೈದಿಗಳು ತಪ್ಪು ಮಾಡಿದರೆ ಬ್ರಿಟೀಷರು ತಮ್ಮ ಅಧಿಕಾರ ಬಲದಿಂದ ಅಂಡಮಾನ್ ದ್ವೀಪದ ಜೈಲಿಗೆ ಅಟ್ಟುತ್ತಿದ್ದರು. ಇಲ್ಲಿ ಖೈದಿಗಳಿಗೆ ಚಿತ್ರ ಹಿಂಸೆ ನೀಡಿ ಕತ್ತಲು ಕೋಣೆಯಲ್ಲಿ ಇಡುತ್ತಿದ್ದರು. ಸಾವರ್ಕರ್ ಸೇರಿದಂತೆ ಲಕ್ಷಾಂತರ ಜನರನ್ನು ಈ ಜೈಲಿನಲ್ಲಿ ಇಡಲಾಗಿತ್ತು.

Comment here