Viral

5 ದಿನಗಳ ಕಾಲ ಆ ತಾಯಿ ಏನನ್ನೂ ತಿನ್ನಲಿಲ್ಲ ಆದರೆ ಮಗುವಿಗೆ ಹಾಲುಣಿಸಿದಳು – ಈ ಫೋಟೋ ಹಿಂದಿನ ಕತೆ ಓದಿ

ಆ ಮಗುವಿನ ಮುಖದಲ್ಲಿ ಮುಗ್ದ ಮಂದಹಾಸ. ಆ ಮಗುವನ್ನು ಎತ್ತಿಕೊಂಡಿರುವ ತಾಯಿಯ ಮುಖದಲ್ಲಿ ಭಯ. ಈ ಫೋಟೋ 2018 ರಲ್ಲಿ ಕೇರಳದಲ್ಲಿ ಪ್ರವಾಹ ಉಂಟಾದಾಗ ತೆಗೆದದ್ದು. ಮಲಯಾಳಂ ನ ಪ್ರತಿಷ್ಠಿತ ಪತ್ರಿಕೆ ಮಲಯಾಳಂ ಮನೋರಮಾದ ಫೋಟೋಗ್ರಾಫರ್ ಗೋಪನ್ ತೆಗೆದದ್ದು. ಈ ಫೋಟೋ ಎಲ್ಲರ ಹೃದಯವನ್ನು ಮುಟ್ಟುತ್ತದೆ. 2018 ರಲ್ಲಿ ಕೇರಳ ರಾಜ್ಯ ಬಾರೀ ಮಳೆಯಿಂದ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತವಾಗುತ್ತದೆ.ಅಖಿಲಾ ಎನ್ನುವ ಈ ಹೆಣ್ಣು ಮಗಳು ಇರುವ ಊರು ಮಲಪ್ಪುರಂ ಕೂಡ ಮುಳುಗಿತು. ರಕ್ಷಣಾ ತಂಡಗಳು ಮೂರು ಹಂತಗಳಲ್ಲಿ ಜನರನ್ನು ರಕ್ಷಿಸಲು ಪ್ರಯತ್ನ ಪಟ್ಟವು. ಆದರೆ ಬಾರೀ ಮಳೆಯಿಂದ ಅವರಿಗೆ ಅದು ಸಾಧ್ಯವಾಗಲಿಲ್ಲ. ಐದು ದಿನಗಳ ನಂತರ ಅವರು ತಮ್ಮ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಿದರು.

ಈ ಐದು ದಿನಗಳಲ್ಲಿ ಆಕೆ ಏನನ್ನೂ ತಿನ್ನಲಿಲ್ಲ. ಆದರೆ ತನ್ನ ಮೂರು ತಿಂಗಳ ಮಗುವಿಗೆ ಐದು ದಿನವೂ ಹಾಲನ್ನು ನೀಡಿದಳು. ಅದಕ್ಕೇ ಹೇಳುವುದು ಈ ಜಗತ್ತಿನಲ್ಲಿ ತಾಯಿಯನ್ನು ಮೀರಿದ ಯೋಧರಿಲ್ಲ ಎಂದು !

ಫೋಟೋಗ್ರಾಫರ್ ಗೋಪನ್

2018 ರ ಕೇರಳ ಪ್ರವಾಹ

ಕೇರಳದಲ್ಲಿ ಈ ನೂರು ವರ್ಷಗಳ ನಂತರ 2018 ರಲ್ಲಿ ಕಂಡು ಕೇಳರಿಯದ ಪ್ರವಾಹ ಉಂಟಾಯಿತು. ಈ ಪ್ರವಾಹದಲ್ಲಿ 483 ಮಂದಿ ಸತ್ತರು. 140 ಜನರು ಕಾಣೆಯಾದರು. ಲಕ್ಷಾಂತರ ಜನರು ನಿರಾಶ್ರಿತರಾದರು.

Comment here