Moral Story

ನನ್ನನ್ನು ಯಾರಾದರೂ ಹೀಯಾಳಿಸಿದಾಗ ನಾನು ನೆನಪಿಸಿಕೊಳ್ಳುವ ಕಥೆ!

‘ವಯಸು ಮೀರುತ್ತಿದೆ ಇನ್ನೂ ಕೆಲಸ ಸಿಗಲಿಲ್ಲವೇ?’ ಹುಟ್ಟಿಸಿದ ತಂದೆ ತಾಯಿಗೆ ಇಲ್ಲದ ಉಸಾಬರಿ ಇವರಿಗ್ಯಾಕೆ? ನನಗೆ ಕೆಲಸ ದೊರೆಯದಿದ್ದರೆ ಇವರಿಗ್ಯಾಕೆ ಬಾಧೆ?ನಮ್ಮ ಒಳ್ಳೆಯದಕ್ಕಾಗಿ ಕೇಳುತ್ತಾರೋ ಅಥವ ನಮ್ಮನ್ನು ಹೀಯಾಳಿಸಲು ಕೇಳುತ್ತಾರೋ…ಗೊತ್ತಿಲ್ಲವಾದರೂ…ಪ್ರತಿಯೊಬ್ಬರೂ ಏನಾದರೊಂದು ಹೇಳುತ್ತಲೇ ಇರುತ್ತಾರೆ. ಹೀಗೆ ಬಹಳಷ್ಟು ಸಂದರ್ಭಗಳಲ್ಲಿ ಆದ ಅವಮಾನಗಳನ್ನು ಎದುರಿಸಿದ್ದೇನೆ. ಇಂತಹ ಸಂದರ್ಭಗಳನ್ನು ನಕ್ಕು ಅಲ್ಲಿಂದ ಹೊರಡುತ್ತೇನೆ. ನಾನೇನೆಂದು ನನಗೆ ಚೆನ್ನಾಗಿ ಗೊತ್ತು!

ಇಷ್ಟಕ್ಕೂ ನಾನು ನೆನೆಪಿಸಿಕೊಳ್ಳುವ ಆ ಕಥೆ ಯಾವುದೆಂದರೆ… ‘The story of the pregnant Elephant’

ಒಮ್ಮೆ ಒಂದು ಅಡವಿಯಲ್ಲಿ ಒಂದು ನಾಯಿ ಹಾಗೂ ಒಂದು ಆನೆ ಒಂದೇ ಸಮಯದಲ್ಲಿ ಗರ್ಭದರಿಸುತ್ತವೆ. 3 ತಿಂಗಳು ಕಳೆಯುವಷ್ಟರಲ್ಲಿ ನಾಯಿ 6 ಮರಿಗಳಿಗೆ ಜನ್ಮ ನೀಡುತ್ತದೆ. ಮತ್ತೆ 6 ತಿಂಗಳುಗಳ ನಂತರ 6 ಮರಿಗಳಿಗೆ ಜನ್ಮ ನೀಡುತ್ತದೆ…ಮತ್ತೊಮ್ಮೆ ಗರ್ಭದರಿಸಿ 6 ತಿಂಗಳು ಕಳೆಯುವಷ್ಟರಲ್ಲಿ 10 ಮರಿಗಳಿಗೆ ಜನ್ಮ ನೀಡುತ್ತದೆ.

ಒಮ್ಮೆ ಆನೆಯ ಬಳಿ ತೆರಳಿದ ನಾಯಿ…’ನಾವಿಬ್ಬರೂ ಒಂದೇ ಸಮಯದಲ್ಲಿ ಗರ್ಭದರಿಸಿದೆವು… ನಾನು ಮೂರು ಬಾರಿ ಹೆತ್ತಿದ್ದೇನೆ. ನೀನು ಇನ್ನೂ ಗರ್ಭವತಿಯಾಗಿಯೇ ಇದ್ದೀಯ.ಅಸಲಿಗೆ ನೀನು ಗರ್ಭದರಿಸಿದ್ದೀಯಾ…ಅಥವಾ ಸುಮ್ಮನೇ ಹೇಳುತ್ತಿದ್ದೀಯಾ?’ ಎಂದು ಪ್ರಶ್ನಿಸಿತು. ಅದಕ್ಕೆ ಆನೆ’ ನಾನು ಹೆರಬೇಕಾಗಿರುವುದು ನಾಯಿ ಮರಿಗಳನ್ನಲ್ಲ, ಆನೆ ಮರಿಯನ್ನು. ಇದಕ್ಕೆ ಬಹಳಷ್ಟು ಸಮಯ ಹಿಡಿಯುತ್ತದೆ. ಯಾಕೆಂದರೆ… ನನ್ನ ಮರಿ ಭೂಮಿ ಮೇಲೆ ಬಂದರೆ, ಭೂಮಿಗೂ ಗೊತ್ತಾಗಬೇಕು… ರಸ್ತೆಯಲ್ಲಿ ನಡೆಯುತ್ತಿದ್ದರೆ…ಜನರೆಲ್ಲಾ ನಿಂತು ಆನಂದ, ಆಶ್ಚರ್ಯಗಳಿಂದ ನೋಡಬೇಕು. ಆದುದರಿಂದ ನನ್ನ ಮರಿ ಹೊರ ಬರಲು ಎರಡು ವರ್ಷಗಳಾಗುತ್ತೆ…ಅದಕ್ಕೇನಂತೆ ಆಗಲಿ ಬಿಡು. ನಿನ್ನ ಕೆಲಸವನ್ನು ಪ್ರಾರಂಭಿಸು. ಮತ್ತೊಮ್ಮೆ ಮರಿಗಳನ್ನು ಹೆರುವಂತವಳಾಗು’ಎಂದು ಹೇಳುತ್ತದೆ.

ಆದ್ದರಿಂದ…ಹೇಳುವವರು ಬಹಳಷ್ಟು ಹೇಳುತ್ತಾರೆ…ನೀನು ತಲುಪ ಬೇಕಾದಕಡೆಗೆ ನಿನ್ನ ಗಮನವಿರಲಿ. ನಿನ್ನ ಯಶಸ್ಸನ್ನು ಕಂಡು ಅವರು ಹೊಟ್ಟೆಕಿಚ್ಚು ಪಡುವಂತಾಗಬೇಕು. ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುವ ಒಂದು ಸಿನಿಮಾ ಡೈಲಾಗ್’ ಸಕ್ಸಸ್ ಎಂದರೆ…ಸ್ವಿಗ್ಗಿ ಯಲ್ಲಿ ನೀಡಿದ ಆರ್ಡರಲ್ಲಾ…ಅರ್ಧ ಗಂಟೆಯಲ್ಲಿ ಬರಲು. ಯಶಸ್ಸು ಪಡೆಯಲು ಬಹಳ ಸಮಯ ಬೇಕಾಗುತ್ತದೆ.’

Comment here