News

ಈಕೆ ವೃತ್ತಿರಿತ್ಯಾ ಟೀಚರ್…..13 ತಿಂಗಳಲ್ಲಿ ಈಕೆಯ ಸಂಪಾದನೆ ಕೋಟಿ ರೂ! ಸೈಲೆಂಟಾಗಿತ್ತು ಈ ಟೀಚರ್ ಳ ವೈಲೆಂಟ್ ಐಡಿಯಾ!

ಪೊಲೀಸರ ನಡುವೆ ಅಮಾಯಕಳಂತೆ ಕುಳಿತಿರುವ ಈ ಟೀಚರ್ ಹೆಸರು ಅನಾಮಿಕಾ ಶುಕ್ಲಾ. ಉತ್ತರ ಪ್ರದೇಶದ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ(KGBV)ದಲ್ಲಿ ಫುಲ್ ಟೈಂ ಸೈನ್ಸ್ ಟೀಚರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ತಿಂಗಳ ಸಂಬಳ ರೂ 30,769/- ಯಾವುದೇ ಚಿಂತೆಯಿಲ್ಲದೆ, ತಿಂಗಳ ಸಂಬಳದಲ್ಲಿ ಐಷಾರಾಮಿ ಜೀವನ ಸಾಗಿಸಬಹುದು.

ಆದರೆ, ಈಟೀಚರ್ ಬಲು ಕಿಲಾಡಿ. ಈಕೆಯ ಆಲೋಚನೆಯೇ ಬೇರೆಯಾಗಿತ್ತು. ಪ್ರತೀ ತಿಂಗಳು 25 KGBV ಶಾಲೆಗಳಿಂದ ಸಂಬಳ ಪಡೆಯುತ್ತಿದ್ದಾಳೆ.ಅಂದರೆ…ತಿಂಗಳಿಗೆ 7.50 ಲಕ್ಷ ರೂಪಾಯಿಗಳು. ಹೀಗೆ 13 ತಿಂಗಳು ಕೋಟಿ ರೂಪಾಯಿಗಳಷ್ಟು ಹಣ ಡ್ರಾ ಮಾಡುತ್ತಿದ್ದಾಳೆ.

2020 ಫೆಬ್ರವರಿ ಯಲ್ಲಿ ಉತ್ತರ ಪ್ರದೇಶದ ಶಿಕ್ಷಣ ಇಲಾಖೆಯ ಅಧಿಕಾರಿಗಳು KGBV ಶಾಲೆಗಳಿಗೆ ಸಂಬಂಧಿಸಿದ ಟೀಚರ್ ಗಳ ಡಿಜಿಟಲ್ ಡೇಟಾಬೇಸ್ ತಯಾರು ಮಾಡುತ್ತಿರುವ ಸಮಯದಲ್ಲಿ….25 ಶಾಲೆಗಳಲ್ಲಿ ಒಂದೇ ಹೆಸರಿನ ಟೀಚರ್ ಕೆಲಸಮಾಡುತ್ತಿರುವುದು ಬೆಳಕಿಗೆ ಬಂದಿತು. ವಿಚಾರಣೆ ನಡೆಸಿದಾಗ….25 ಶಾಲೆಗಳಲ್ಲೂ ತನ್ನ ಹೆಸರಿನ ಹಾಖಲೆಗಳನ್ನು ಸೃಷ್ಟಿಸಿ, ಪ್ರತೀ ತಿಂಗಳು ಆಯಾ ಶಾಲೆಗಳಿಂದ ಸಂಬಳ ಪಡೆಯುತ್ತಿದ್ದಳು.

ಇದರ ಹಿಂದೆ ಇತರರ ಕೈವಾಡವಿಲ್ಲದೆ ಒಬ್ಬ ಟೀಚರ್ 25 ಕಡೆ ಏಕಕಾಲದಲ್ಲಿ ಕೆಲಸ ಮಾಡುತ್ತಿರುವಂತೆ ದಾಖಲೆ ಸೃಷ್ಟಿಸಲಾಗದು. ಶಾಲೆಗೆ ಹೋಗದೆ, ಮಕ್ಕಳಿಗೆ ಪಾಠ ಮಾಡದೆ…. ಸದರಿ ಟೀಚರ್ ಗೆ ಸಂಬಂಧಿಸಿದ ಸಂಬಳ ಚೀಟಿಯನ್ನು ಅಕೌಂಟ್ಸ್ ವಿಭಾಗಕ್ಕೆ ಪ್ರಿನ್ಸಿಪಾಲ್ ಕಳುಹಿಸಿದ್ದಾದರೂ ಹೇಗೆ?ಎಂಬ ಪ್ರಶ್ನೆ ನಿಗೂಢವಾಗಿದೆ.

Comment here