Information

ಚಂಡ ಮಾರುತದ ಎಚ್ಚರಿಕೆಗಳೇನು ? ಅವುಗಳನ್ನು ಹೇಗೆ ಅರ್ಥೈಸಿಕೊಳ್ಳುವುದು ಗೊತ್ತೇ ?!

ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶವನ್ನು ನಡುಗಿಸಿದೆ. ಈ ಮೊದಲು ಟಿಟ್ಲಿ ಮತ್ತು ಹುಡ್ ಹಡ್ ಚಂಡಮಾರುತಗಳು ಸಹ ಅರಬ್ಬಿ ಸಮುದ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾನಿ ಉಂಟು ಮಾಡಿದವು. ಆದರೆ ಯಾವುದೇ ಚಂಡಮಾರುತಗಳು ಬರಲಿ ಹವಾಮಾನ ಇಲಾಖೆಯವರು ಚಂಡ ಮಾರುತದ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಅನೌನ್ಸ್ ಮಾಡುತ್ತಾರೆ. ಒಂದನೇ ಸ್ಥಿತಿ, ಎರಡನೇ ಸ್ಥಿತಿ ಹೀಗೆ ಚಂಡಮಾರುತದ ತೀರ್ವತೆಯ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಾರೆ. ಈ ಎಚ್ಚರಿಕೆಯ ಸಂದೇಶವೇನು ? ಇದನ್ನು ಯಾವಾಗ ಪ್ರಕಟಿಸುತ್ತಾರೆ ? ಅಂದರೆ…

ಭಾರತೀಯ ಹವಾಮಾನ ಇಲಾಖೆ (ಐಎಂಡಿ) 4 ರೀತಿಯಲ್ಲಿ ರಾಜ್ಯ ಸರ್ಕಾರಗಳಿಗೆ ಚಂಡಮಾರುತದ ಎಚ್ಚರಿಕೆಗಳನ್ನು ನೀಡುತ್ತದೆ. ಇದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳಲ್ಲಿ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ನಾಗರಿಕರಿಗೆ ಎಚ್ಚರಿಕೆ ನೀಡಬೇಕು. ಚಂಡಮಾರುತಗಳ ಬಗ್ಗೆ ನಾಗರಿಕರನ್ನು ಎಚ್ಚರಿಸಬೇಕು.

ಮೊದಲ ಎಚ್ಚರಿಕೆ

ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ವಾತಾವರಣ ಆಗುವುದಕ್ಕೆ 72 ಗಂಟೆಗಳ ಮೊದಲು ಅಧಿಕಾರಿಗಳು ಎಚ್ಚರಿಕೆಯನ್ನು ನೀಡುತ್ತಾರೆ. ಇದರಿಂದ ತೀರ ಪ್ರದೇಶಗಳಲ್ಲಿನ ಜನರು ಬಹಳ ಜಾಗೃತಿಯಿಂದ ಇರಲು ಅನುಕೂಲವಾಗುತ್ತದೆ.

ಎರಡನೇ ಎಚ್ಚರಿಕೆ

ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ವಾತಾವರಣ ಸೃಷ್ಟಿ ಆಗುವುದಕ್ಕೆ 48 ಗಂಟೆಗಳ ಮೊದಲು ಎಚ್ಚರಿಕೆಯನ್ನು ನೀಡಲಾಗುತ್ತದೆ. ಅಂದರೆ ಬಿರುಗಾಳಿ, ಚಂಡಮಾರುತ, ಸಮುದ್ರದಲ್ಲಿ ಅಲೆಗಳ ಏರಿಳಿತ ಇವು ಸಂಬಂದಿಸಿವೆ.

ಮೂರನೇಯ ಎಚ್ಚರಿಕೆ

ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಸೃಷ್ಟಿ ಆಗುವುದಕ್ಕಿಂತ 24 ಗಂಟೆಗಳ ಮೊದಲು ಎಚ್ಚರಿಕೆಯನ್ನು ನೀಡಲಾಗುತ್ತದೆ. ತೂಫಾನಿನ ವೇಗ, ಅದರ ತೀರ್ವತೆ, ಎಲ್ಲಿಂದ ಶುರುವಾಗುತ್ತೆ ಎಂದು ಪ್ರತಿ ಮೂರು ಗಂಟೆಗೊಮ್ಮೆ ವಿವರಗಳನ್ನು ನೀಡಬೇಕು.

ನಾಲ್ಕನೆ ಎಚ್ಚರಿಕೆ

ತೂಫಾನು ತೀರ ಪ್ರದೇಶಗಳನ್ನು ಮುಟ್ಟುವುದಕ್ಕೆ ಕನಿಷ್ಠ 12 ಗಂಟೆಗಳ ಮೊದಲು ಎಚ್ಚರಿಕೆ ನೀಡಬೇಕು. ಚಂಡಮಾರುತ ಮುಗಿದ ಮೇಲೆ ಅಲ್ಲಿನ ವಾತಾವರಣ ಹೇಗಿರುತ್ತೆ ? ಎಂದು ವಿವರಗಳನ್ನು ನೀಡಬೇಕು.

Comment here