Information

ಆಂಜನೇಯನ ಪ್ರತಿಮೆ ಸಿಂಧೂರ ಬಣ್ಣದಲ್ಲಿ ಉಳಿಯಲು ಕಾರಣವೇನು?

ನಾನು ನೋಡಿದ ಆಂಜನೇಯ ಸ್ವಾಮಿಯ ವಿಗ್ರಹದ ಬಣ್ಣ ಹೆಚ್ಚು ಸಿಂಧೂರ ಬಣ್ಣದಲ್ಲಿ ಇದೆ.ಯಾಕೆ ಅಂತೀರ ? ಈ ಬಗ್ಗೆ ನನಗೆ ತಿಳಿದ ಕೆಲವು ಜನರಿಗೆ ಕೇಳಿದರೇ ಅವರು ಏನೇನೋ ಉತ್ತರಗಳನ್ನು ಕೊಟ್ಟರು. ಕೊನೆಗೆ ಗೂಗಲ್ ಗೂ ಪ್ರಶ್ನೆ ಕೇಳಿದೆ. ಇತಿಹಾಸಕ್ಕೆ ಸಂಬಂದಿಸಿದ ಲಾಜಿಕಲ್ ಆಗಿ ಉತ್ತರ ದೊರಕಿತು. ಅದನ್ನೇ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಒಮ್ಮೆ ಸೀತಾದೇವಿ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳುತ್ತಿರುವಾಗ ಆಂಜನೇಯನು ಯಾಕೆ ಸಿಂಧೂರವನ್ನು ಹಚ್ಚಿಕೊಳ್ಳುವಿರಿ ಎಂದಾಗ ಅದಕ್ಕೆ ಸೀತಾದೇವಿ, ನನ್ನ ರಾಮನು ಸುಖವಾಗಿ ಇರಲು ಬೊಟ್ಟು ಹಚ್ಚಿಕೊಳ್ಳುವೆ ಎಂದಾಗ ಅಂದಿನಿಂದ ಆಂಜನೇಯನು ತನ್ನ ಮೈ ಬಣ್ಣಕ್ಕೆ ಸಿಂಧೂರದ ಬಣ್ಣವನ್ನು ಹಚ್ಚಿಕೊಂಡ. ನನ್ನ ರಾಮನಿಗೆ ಸದಾ ಜಯವಾಗಲಿ ಎಂದು !

ಇತ್ತ ಸಿಂಧೂರದಿಂದ ಒಳ್ಳೆಯದು ಆಗುತ್ತದಾ ಎಂದು ಪಕ್ಕಕ್ಕೆ ಸರಿಸಿದರೆ.. ಒಬ್ಬ ವ್ಯಕ್ತಿಯನ್ನ ಆರಾಧಿಸಿದರೆ ಅದೂ ಇಷ್ಟರಮಟ್ಟಿಗೆ ಪೂಜಿಸ್ತಾರಾ ? ಅನ್ನುವ ಕಾನ್ಸೆಪ್ಟ್ ನಮಗೆ ಸಿಗುತ್ತದೆ. ತಮಗೆ ಇಷ್ಟವಾದವರಿಗೋಸ್ಕರ ಇದೆಲ್ಲಾ ಮಾಡ್ತಾರಾ ? ಅನ್ನೋದು ಅಸಲು ವಿಷಯ.

Comment here