Information

ಪೂಜೆಗೆ ತೆಂಗುನಕಾಯಿ ಮತ್ತು ಬಾಳೆಹಣ್ಣನ್ನು ಏಕೆ ಬಳಸುತ್ತಾರೆ ? ಇದಕ್ಕೂ ಅದಕ್ಕೂ ಸಂಬಂಧವೇನು ?

ಪೂಜೆಗಳಲ್ಲಿ ತೆಂಗಿನ ಕಾಯಿ ಮತ್ತು ಬಾಳೆಹಣ್ಣನ್ನು ಬಳಸುವುದನ್ನು ನೀವು ಗಮನಿಸಿರಬಹುದು. ಇದೇ ವಿಷಯದ ಬಗ್ಗೆ ನನಗೆ ಬಹಳ ಕುತೂಹಲ ಇತ್ತು. ಇದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದಾಗ ನನಗೆ ಕೆಲವು ವಿಷಯಗಳು ಅರಿವಾಯಿತು. ಅದು ಲಾಜಿಕ್ ಆಗಿ ಇರೋಂದ್ರಿಂದ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳು ಪವಿತ್ರ ಹಣ್ಣುಗಳಾಗಿವೆ. ಏಕೆಂದರೆ ಎರಡೂ ಬಲಿಯದ ಹಣ್ಣಿನ ವರ್ಗಕ್ಕೆ ಸೇರುತ್ತವೆ. ಅವು ಬೀಜಗಳಿಂದ ಮರಗಳಿಗೆ ಬದಲಾಗುವ ಕ್ರಮದಲ್ಲಿ ಬೇರೆ ಗಿಡಗಳಿಗಿಂತ ಬಹಳ ಭಿನ್ನವಾಗಿವೆ.

ಬೇರೆ ಗಿಡಗಳು ಎಂಜಲುಗಳಿಂದ ಹುಟ್ಟುತ್ತವೆ. ಅಂದರೆ ನಾವು ಯಾವುದೇ ಹಣ್ಣು ತಿಂದು ಅದರ ಒಳಗಿನ ಬೀಜವನ್ನು ಬಿಸಾಡಿದರೆ ಅದರಿಂದ ಹೊಸ ಗಿಡ ಹುಟ್ಟುತ್ತೆ. ಆದರೆ ಬಾಳೆ ಹಣ್ಣು ತಿಂದು ಸಿಪ್ಪೆ ಬಿಸಾಡಿದರೆ ಏನೂ ಹುಟ್ಟುವುದಿಲ್ಲ. ತೆಂಗಿನಕಾಯಿ ಅಷ್ಟೇ. ಕಾಯಿ ತಿಂದು ಕರಟ ಬಿಸಾಡಿದರೆ ಅದು ಹುಟ್ಟುವುದಿಲ್ಲ.

ಬಾಳೆದಂಡಿನಿಂದ ಇನ್ನೂಂದು ಬಾಳೆಗಿಡ ಹುಟ್ಟುತ್ತೆ. ಒಡೆಯದ ಪೂರ್ಣ ತೆಂಗಿನಕಾಯಿ ಇನ್ನೊಂದು ಸಸಿಯಾಗುತ್ತೆ. ಎಂಜಲಿನಿಂದ ಇದು ಬೆಳೆಯುವುದಿಲ್ಲ.

ಕೆಲವು ಪ್ರಾಂತ್ಯಗಳಲ್ಲಿ ಸೀಜನಲ್ ಹಣ್ಣುಗಳನ್ನು ದೇವರಿಗೆ ಸಮರ್ಪಿಸುವ ಪದ್ದತಿ ಇದೆ.

Comment here