Information

ಪಾರಿವಾಳಗಳು ಮರಗಳ ಮೇಲೆ ಏಕೆ ಗೂಡು ಕಟ್ಟುವುದಿಲ್ಲವೆಂದು ನಿಮಗೆ ಗೊತ್ತಾ? ಇದರ ಹಿಂದಿರುವ ಅಸಲು ಕಾರಣ ಇಲ್ಲಿದೆ ನೋಡಿ!

ಪಾರಿವಾಳಗಳು ಮರದ ಮೇಲೆ ಕುಳಿತಿರುವುದನ್ನು ನೀವೆಂದಾದರೂ ನೋಡಿದ್ದೀರಾ?ಅಥವಾ ಪಾರಿವಾಳಗಳು ಮರದ ಮೇಲೆ ಗೂಡು ಕಟ್ಟಿರುವುದನ್ನು ನೋಡಿದ್ದೀರಾ? ಕಂಡಿತಾ ನೋಡಿರಲಾರಿರಿ. ಏಕೆಂದರೆ, ಅಸಲಿಗೆ ಪಾರಿವಾಳಗಳು ಗೂಡು ಕಟ್ಟುವುದಿಲ್ಲ. ಬನ್ನಿ ಈ ಆಸಕ್ತಿಕರವಾದ ವಿಷಯದ ಬಗ್ಗೆ ತಿಳಿಯೋಣ.

ಹಿಂದಿನ ಕಾಲದಲ್ಲಿ ರಾಜರು ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಉಪಯೋಗಿಸುತ್ತಿದ್ದರು. ತಮ್ಮ ಕಾಲುಗಳಿಗೆ ಕಟ್ಟಲಾಗಿರುವ ಸಂದೇಶವನ್ನು ಹೊತ್ತು ಪಾರಿವಾಳಗಳು ಇತರೆ ದೇಶಗಳಿಗೆ ತೆರಳಿ ಸಂಬಂಧಿಸಿದವರಿಗೆ ತಲುಪಿಸುತ್ತಿದ್ದವು. ರಾಜರಿಗೆ ಶತ್ರುಗಳು ಅಧಿಕವಾಗಿರುತ್ತಾರೆ. ಪಾರಿವಾಳಗಳು ಹೊತ್ತು ಸಾಗುತ್ತಿರುವ ಸಂದೇಶಗಳನ್ನು ಶತ್ರುಗಳು ಓದುವ ಸಾಧ್ಯತೆಗಳಿವೆ. ಆದುದರಿಂದ ಪಾರಿವಾಳಗಳು ಮರಗಳ ಮೇಲೆ ಗೂಡನ್ನು ನಿರ್ಮಿಸದೆ, ತಮ್ಮನ್ನು ಕಾಪಾಡಿಕೊಳ್ಳಲು ಮನೆಗಳಲ್ಲಿ ಗೂಡುಗಳನ್ನು ನಿರ್ಮಿಸಿಕೊಳ್ಳುತ್ತಿದ್ದವು.


ಪಾರಿವಾಳಗಳು ಮರಗಳಲ್ಲಿ ಗೂಡುಗಳನ್ನು ನಿರ್ಮಿಸಿಕೊಂಡಿರುವುದನ್ನು ನಿಮ್ಮಲ್ಲಿ ಕೆಲವರು ನೋಡಿರಬಹುದು. ನಗರಗಳಲ್ಲಿ ಅಲ್ಲದೆ, ಹೆಚ್ಚಿಗೆ ಮರಗಳಿರುವ ಪ್ರದೇಶಗಳಲ್ಲಿ ಅವು ವಾಸಿಸುತ್ತಿರುವುದರಿಂದ ಈ ರೀತಿ ಪಾರಿವಾಳಗಳು ಮರಗಳಲ್ಲಿ ಗೂಡುಗಳನ್ನು ನಿರ್ಮಿಸಿರುತ್ತವೆ.

ನಗರಗಳಲ್ಲಿ ನಮಗೆ ಕಾಣಿಸುವ ಪಾರಿವಾಳಗಳನ್ನು ‘ರಾಕ್ ಡವ್’ ಎಂದು ಕರೆಯಲಾಗುತ್ತದೆ. ಅಸಲಿಗೆ ‘ರಾಕ್ ಡವ್’ ಪಾರಿವಾಳಗಳು ಯುರೋಪ್ ನಿಂದ ಬಂದಂತಹವುಗಳಾಗಿದ್ದು, ಕಟ್ಟಡ, ಕಿಟಕಿ, ಸೇತುವೆ, ನಗರಕ್ಕೆ ಸಮೀಪದಲ್ಲಿರುವ ಬೆಟ್ಟ ಗುಡ್ಡಗಳಲ್ಲಿ ‘ ರಾಕ್ ಡವ್ಸ್’ ಇರುತ್ತವೆ.

ಮಾನವ ಮಂಗನಿಂದ ಹುಟ್ಟಿದ ಎಂದು ಹೇಳುತ್ತಾರೆ. ಕಾಲ ಬದಲಾದಂತೆ ಮಂಗನ ಲಕ್ಷಣಗಳು ಕಾಣದಾದವು. ಉದಾಹರಣೆಗೆ: ಮಂಗಗಳಂತೆ ಮರಗಳಲ್ಲಿ ನೇತಾಡುವುದು. ಒಂದು ಮರದಿಂದ ಮತ್ತೊಂದು ಮರಕ್ಕೆ ಹಾರುವುದು. ಆದರೆ, ಮಾನವನಾಗಿ ಬದಲಾವಣೆ ಗೊಂಡನಂತರ, ಮರವನ್ನೇರುವುದು, ನೇತಾಡುವುದು, ಮರದಿಂದ ಮರಕ್ಕೆ ಹಾರುವುದು ಮೊದಲಾದ ಕ್ರಿಯೆಗಳು ಬದಲಾದವು. ಅದೇರೀತಿ ಪಾರಿವಾಳಗಳೂ ಸಹ ಕಾಲ ಕಳೆದಂತೆ ತಮ್ಮ ಸ್ನಾಯುಗಳ ಶಕ್ತಿಯನ್ನು ಕಳೆದುಕೊಂಡು, ಮರದ ಮೇಲೆ ಬಹಳ ಸಮಯ ಕುಳಿತುಕೊಳ್ಳುವ ಶಕ್ತಿಯನ್ನು ಕಳೆದುಕೊಂಡವು. ಆದುದರಿಂದ ಪಾರಿವಾಳಗಳು ಮರದ ಮೇಲೆ ಕುಳಿತುಕೊಳ್ಳುವುದಿಲ್ಲ ಹಾಗೂ ಗೂಡು ಕಟ್ಟುವುದಿಲ್ಲ.

Comment here